
ಬೀದರ್: ಎ.4:ಹೈದರಾಬಾದ್‍ನ ಎವಿಐಎಸ್ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಐಎಂಎ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಉಬ್ಬಿದ ರಕ್ತನಾಳಗಳ ತಪಾಸಣೆ ಶಿಬಿರದಲ್ಲಿ 60 ಜನರ ಉಚಿತ ತಪಾಸಣೆ ಮಾಡಲಾಯಿತು.
ಎವಿಐಎಸ್ ಆಸ್ಪತ್ರೆಯ ಡಾ. ರಾಮ ಪ್ರಭಾಕರ ಅವರು ಲೆಗ್ ಅಲ್ಸರ್, ವರಿಕೋಸ್ ವೆಯ್ನ್ಸ್ ಮೊದಲಾದವುಗಳ ತಪಾಸಣೆ ನಡೆಸಿದರು.
ಜಿಲ್ಲೆಯ ರೋಗಿಗಳ ಅನುಕೂಲಕ್ಕಾಗಿ ಹೈದರಾಬಾದ್‍ನ ಎವಿಐಎಸ್ ಆಸ್ಪತ್ರೆ ಸಹಯೋಗದಲ್ಲಿ ಉಬ್ಬಿದ ರಕ್ತನಾಳಗಳ ಉಚಿತ ತಪಾಸಣೆ ಶಿಬಿರ ನಡೆಸಲಾಗಿದೆ. ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ನಿತಿನ್ ಕರ್ಪೂರ ಹೇಳಿದರು.
ರೋಟರಿ ಕ್ಲಬ್ ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ರೋಟೇರಿಯನ್‍ಗಳಾದ ಸೂರ್ಯಕಾಂತ ರಾಮಶೆಟ್ಟಿ, ಡಾ. ಕಪಿಲ್ ಪಾಟೀಲ, ಲೋಕೇಶ ಹಿರೇಮಠ, ಚೇತನ ಮೇಗೂರ ಮತ್ತಿತರರು ಇದ್ದರು.