ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆ

ಇಂಡಿ:ಜೂ.29:ಪಟ್ಟಣದ ಎಸಿ ಕಚೇರಿ ಸಭಾಂಗಣದಲ್ಲಿ ಎಸಿ ರಾಮಚಂದ್ರ ಗಡಾದೆ ಅಧ್ಯಕ್ಷತೆಯಲ್ಲಿ ಇಂಡಿ ಉಪ ವಿಭಾಗ ಮಟ್ಟದ ಜಾಗ್ರತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆ ಜರುಗಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಜೆ.ಇಂಡಿ ಅವರು ಸ್ವಾಗತಿಸಿ,ಸಭೆಯನ್ನು ಉಪ ವಿಭಾಗಾ„ಕಾರಿಗಳು ನಡೆಸಿಕೊಡಲು ಮನವಿ ಮಾಡಿಕೊಂಡರು.

ಇಂಡಿ ಉಪ ವಿಭಾಗದಲ್ಲಿ ಒಟ್ಟು 7 ದೌರ್ಜನ್ಯ ಪ್ರಕರಣಗಳು ಜರುಗಿದ್ದು,ಇದರಲ್ಲಿ 3 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ.ಒಂದು ಪ್ರಕರಣದಲ್ಲಿ ಆದೇಶ ಮಾಡಲಾಗಿದೆ.ಮಾಹಿತಿ ಪಡೆದುಕೊಳ್ಳಲು ವಿಜಯಪುರ ಸಹಾಯಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.ಒಂದು ಪ್ರಕರಣವನ್ನು ವಿಜಯಪುರದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಅ„ಕಾರಿ ಬಿ.ಜೆ.ಇಂಡಿ ಸಭೆಯ ಗಮನಕ್ಕೆ ತಂದರು.ಸಿಂದಗಿ ತಾಲೂಕಿನ ಕಡ್ಲೇವಾಡ ಗ್ರಾಮದ ಜಮೀನು ಸುಮಾರು 1975ಕ್ಕಿಂತ ಮುಂಚೆ ಲೋಕೊಪಯೋಗಿ ಇಲಾಖೆಗೆ ರಸ್ತೆಯಲ್ಲಿ ಹೋಗಿರುವುದರಿಂದ ಪರಿಹಾರ ಕೊಡಲು ಅವಕಾಶ ಇಲ್ಲದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಚಡಚಣ ತಾಲೂಕಿನ ನಂದ್ರಾಳ,ಇಂಡಿ ತಾಲೂಕಿನ ಲಾಳಸಂಗಿ,ಹಂಜಗಿ ಗ್ರಾಮದಲ್ಲಿ ಪಜಾ,ಪಪಂಗಳ ಕುಂದುಕೊರತೆ ಸಭೆ ಜರುಗಿಸುವಂತೆ ಚರ್ಚಿಸಿ ನಿರ್ದೇಶನ ನೀಡಲಾಯಿತು.ಅಥರ್ಗಾ,ಬೆನಕನಹಳ್ಳಿ ಗ್ರಾಮದಲ್ಲಿನ ನಿವೇಶನ ಹಾಗೂ ಸ್ಥಳದ ಮಾಹಿತಿ ಸಂಬಂಧಪಟ್ಟ ಅ„ಕಾರಿಗಳಿಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡುವಂತೆ ಎಸಿ ಅವರು ಅ„ಕಾರಿಗಳಿಗೆ ಸೂಚಿಸಿದರು.ಜಾಗ್ರತಿ ಸಮಿತಿ ಸಭೆಗೆ ಕಡ್ಡಾಯವಾಗಿ ಪೆÇಲೀಸ್ ಉಪ ಅ„ಕ್ಷಕರು ಭಾಗವಹಿಸುವಂತೆ ಪತ್ರ ಬರೆಯಲು ಸಮಾಜ ಕಲ್ಯಾಣ ಇಲಾಖೆ ಅ„ಕಾರಿಗಳಿಗೆ ಸೂಚಿಸಿದರು.

ಸಮಿತಿಯ ಸದಸ್ಯರಾದ ಶಿವಾನಂದ ಮೂರಮನ,ಪರಶುರಾಮ ಹೊಸಮನಿ,ಚಂದ್ರಶೇಖರ ಗಣಜಲಿ ಸಭೆಯಲ್ಲಿ ತಾಲೂಕಿನ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.ತಹಶೀಲ್ದಾರ ನಾಗಯ್ಯ ಹಿರೇಮಠ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅ„ಕಾರಿಗಳು ಸಭೆಯಲ್ಲಿ ಇದ್ದರು.ಸಮಾಜ ಕಲ್ಯಾಣಾ„ಕಾರಿ ಬಿ.ಜೆ.ಇಂಡಿ ಸ್ವಾಗತಿಸಿ,ವಂದಿಸಿದರು.