
ಮುದ್ದೇಬಿಹಾಳ;ಜ.14: ತಾಲೂಕಿನ ಕಂದಾಯ ಇಲಾಖೆಯಲ್ಲಿ ಸಂದ್ಯಾಸುರಕ್ಷಾ ವಿಧವಾ ವೇತನ, ಪಡಿತರ ಚೀಟಿ ಮಾಡಿಸಲು ಅನಗತ್ಯ ವಿಳಂಬ ಹಾಗೂ ಇದಕ್ಕೆ ಲಂಚವನ್ನು ಕೇಳುವುದು ಕಂಡುಬಂದರೆ ಅಂತವರ ಮೇಲೆ ಕೂಡಲೆ ಕ್ರಮ ಕೈಗೊಳ್ಳುವ ಮೂಲಕ ಶಿಕ್ಷೇಗೆ ಗುರಿಪಡಿಸಲಾಗುವುದು ಎಂದು ಎಂದು ಉಪಲೋಕಾಯುಕ್ತ ಬಿ ಎಸ್ ಪಾಟೀಲ್ ಹೇಳಿದರು.
ಪಟ್ಟಣದ ಇಲ್ಲಿನ ತಾಲೂಕು ಪಂಚಾಯತ ಸಭಾ ಭವನದಲ್ಲಿ ಬುಧುವಾರ ನಡೆದ ಜಿಲ್ಲಾ ಪಂಚಾಯತ ವಿಜಯಪುರ , ತಾಲೂಕ ಪಂಚಾಯತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಯಲ್ಲಿ ಅವರು ಮಾತನಾಡಿದರು.
ಈಗಾಗಲೇ ತಾಲುಕಿನಲ್ಲಿ ಆಯಾ ಇಲಾಖೆಗಳ ಕಾರ್ಯವೈಖರಿ ಪ್ರಸ್ತುತ ಪ್ರಾರಂಭಗೊಂಡಿರುವ ಕಾಮಗಾರಿಗಳು ಆಗಬೇಕಿರುವ ಅಭಿವೃದ್ಧಿಗಳು ಅಪೂರ್ಣ ಗೊಂಡ ಕೆಲಸಗಳನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳೇನು? ಈ ಕುರಿತು ಸಂಪೂರ್ಣ ವರದಿ ತಯಾರಸಿ ನೀಡುವಂತೆ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಸಿದರು.
ತೋಟಗಾರಿಕೆ, ಹಾಗೂ ಕೃಷಿ ಇಲಾಖೆಗಳಲ್ಲಿ ರೈತರಿಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಗಳನ್ನು ರೈತರಿಗೆ ನಿಗದಿತ ಅವಧಿಯಲ್ಲಿ ತಲುಪಿಸಬೇಕು,ಹಾಗೂ ಕೃಷಿ ಚಟುವಟಿಕೆಯಲ್ಲಿ ರೈತರಿಗೆ ಮಣ್ಣಿನ ಪರೀಕ್ಷೆ ಮಾಡುವಂತೆ ರೈತರಿಗೆ ಜಾಗೃತಿ ಮೂಡಿಸುವ ಮೂಲಕ ಮಣ್ಣಿನ ಸತ್ವ ಹೆಚ್ಚಾಗಲು ಮತ್ತು ಉತ್ತಮ ಬೆಳೆ ಬೆಳೆದು ಫಸಲು ದೊರಕುಂವಂತೆ ಮಾಡಲು ಮಣ್ಣಿನ ಪರೀಕ್ಷೆ ಯಿಂದ ಏನೆಲ್ಲಾ ಲಾಭವಿದೆ ಎಂದು ರೈತರಿಗೆ ಅಗತ್ಯ ಮಾಹಿತಿಯನ್ನು ನೀಡಬೇಕು.
ಮಂಗಲ ಭವನಗಳಲ್ಲಿ ತಾಜ್ಯದ ನಿರ್ವಹಣೆ ಕುರಿತು ಪುರಸಭೆ ಇಲಾಖೆ ಕೈಗೊಂಡ ಕ್ರಮಗಳು ಏನು? ಗ್ರೀನ್ ಬಾಸ್ಕೆಟ್, ಯಲ್ಲೂ ಬಾಸ್ಕೆಟ್ ಗಳನ್ನು ಪಾನಶಾಪ್ ಗಳ ಮುಂದೆ ಇರಬೇಕು ಸ್ವಚ್ಛತೆಗೆ ಆದ್ಯತೆ ನೀಡಬೇಕು, ಇಲ್ಲಿ ಯಾರೂ ಕೂಡ ಮಾಸ್ಕ್ ನ್ನು ಇಲ್ಲಿಯ ಜನರು ಧರಿಸುತ್ತಿಲ್ಲ ಎಂಬ ಪ್ರಶ್ನಗೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ,ಮಾಸ್ಕ್ ಕುರಿತು ಜಾಗೃತಿ ಅಭಿಯಾನ ಮಾಡಿದ್ದೇವೆ ಮತ್ತು ಮಾಸ್ಕ್ ಧರಿಸದ ಜನರಿಗೆ ದಂಡವನ್ನು ವಿಧಿಸಿದ್ದೇವೆ, ಇನ್ನೂ ತರಕಾರಿ ಮಾರುಕಟ್ಟೆಯಲ್ಲಿ ಒಣಕಸ ಹಸಿಕಸ ಹಾಕುವ ಕುರಿತು ಕ್ರಮಕೈಗೂಳ್ಳಲಿದ್ದೇವೆ, ನಗರದಲ್ಲಿ 40 ರಿಂದ 45 ರಸ್ತೆಗಳ ಅತಿಕ್ರಮಣ ತೆರವುಗೂಳಸಿದ್ದೇವೆ ,80% ಜನರು ನಮಗೆ ಸಹಕಾರ ನೀಡುತ್ತಿದ್ದಾರೆ ಎಂದರು,
ಶಾಲೆಗಳಲ್ಲಿ ಕುಡಿಯುವ ನೀರು ,ಆಟದ ಮೈದಾನ ,ಶೌಚಾಲಯ ಎಲ್ಲಾ ಶಾಲೆಗಳಲ್ಲಿ ಆಗಬೇಕು ಯಾವ ಶಾಲೆಯಲ್ಲಿ ಆಗಿಲ್ಲ ಅಪೂರ್ಣ ಕಾಮಗಾರಿಗಳಿದ್ದರೆ ಪೂರ್ಣಗೊಳಿಸಲು ಕ್ಷೇತ್ರದ ಶಿಕ್ಷಣಾಧಿಕಾರಿ ವಿರೇಶ ಜೇವರಗಿ ಅವರಿಗೆ ಸೂಚಿಸಿದರು
ಪಂಚಾಯತ್ ರಾಜ್ಯ ಇಲಾಖೆ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಗಳಲ್ಲಿ ಸರಿಯಾದ ಚರಂಡಿಗಳು ಯಾಕೆ ನಿರ್ಮಾಣ ಮಾಡಿಲ್ಲ? ಈಗಲೂ ಹಳ್ಳಿಗಳಲ್ಲಿ ಬಚ್ಚಲು ನೀರು ರಸ್ತೆಯ ಮೇಲೆಯೇ ಹರಿಯುತ್ತವೆ ಇದರಿಂದ ಅನೇಕ ಗಂಭೀರವಾದ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ,ಇಂತಹ ಹಳ್ಳಿಗಳಲ್ಲಿ ಸರಿಯಾದ ಚರಂಡಿ ನಿರ್ಮಾಣ ಮಾಡಬೇಕು.
ಕಾಲುವೆಗಳು ಬಿರಕು ಬಿಟ್ಟಿವೆ;
ಈ ಭಾಗದ ಬಹುದಿನದ ಕನಸಿನಂತೆ ಕಾಲುವೆಗಳು ಆಗಿದ್ದು ಪ್ರತಿವಾರ ಕೆನಾಲ್ ಗೆ ನೀರು ಬಿಡಲಾಗುತ್ತದೆ, ಕೆನಾಲ್ ಲೈನಿಂಗ್ ಕಿತ್ತುಕೊಂಡು ಹೋಗಿವೆ,ಹಲವಡೆ ಬಿರಕು ಬಿಟ್ಟಿವೆ,ಇದರಿಂದ ಕಾಲುವೆಗಳು ಹಾಲಾಗಿವೆ,ಅಕ್ಕಪಕ್ಕದ ಹೂಲಗಳಿಗೆ ನೀರು ನುಗ್ಗಿ ಹೂಲಗಳು ಹಾಳಾಗುತ್ತಿವೆ ,ಇದಕ್ಕೆ ಯಾರು ಹೋಣೆ? ಬಿರಕು ಬಿಟ್ಟ ಕೆನಾಲ್ ಹೇಗೆ ಸರಿಪಡಿಸ್ತಿರಾ? ನೀರು ವ್ಯರ್ಥ ಮಾಡಬಾರದು ಇದಕ್ಕೆ ಹೇಗೆ ಕ್ರಮಕೈಗೂಳ್ಳಿತ್ತಿರ ತೋರಸಿ? ನೀರು ವ್ಯರ್ಥವಾದರೆ ಮಹಾಪರಾಧ ಮಾಡಿದಂತೆ,ಹೀಗಾದರೆ ಕ್ರಮ ಕೈಗೊಂಡು ಕೇಸ್ ಮಾಡಬೇಕಾಗುತ್ತದೆ ಎಂದು ಕೆಬಿಜೆಎನೆಲ್ ಅಧಿಕಾರಿಗಳಿಗೆ ಸಹಾಯಕ ಅಭಿಯಂತರಗಳಿಗೆ ಎಚ್ಚರಿಕೆ ನೀಡಿದರು
ಮೀನುಗಾರಿಕೆ, ಪೋಲಿಸ್ ಇಲಾಖೆ,ಆರೋಗ್ಯ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಪಶುಸಂಗೋಪನೆ ಇಲಾಖೆ,ಕೃಷಿ ಇಲಾಖೆ,ಕಡಿಯುವ ನೀರು ಮತ್ತು ನೈರ್ಮಲ್ಯ, ಸಮಾಜಕಲ್ಯಾಣ ,ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ,ಹೆಸ್ಕಾಂ,ವಾಣಿಜ್ಯ ಇಲಾಖೆ,ಹೀಗೆ ವಿವಿಧ ಇಲಾಖೆಗಳ ಪರಿಶೀಲನೆ ಸಭೆ ನಡೆಸಿ ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡಬೇಕು ಆಯಾ ಇಲಾಖೆಗಳ ಜವಾಬ್ದಾರಿ ಅರಿತು ಕರ್ತವ್ಯ ನಿಷ್ಠೆಯಿಂದ ಕೆಲಸಮಾಡಿ ಮಾದರಿಯಾಗಬೇಕು ಎಂದರು
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಲೋಕಾಯುಕ್ತ ಎಸ್ ಪಿ ಯಶೋಧಾ ಒಂಟಗೋಡಿ, ಡಿ ವಾಯ್ ಎಸ್ ಪಿ ಬಸವರಾಜ ಯಲಿಗಾರ, ಇನಿಸ್ಪೇಕ್ಟರ್ ರಮೇಶ ಅವಜಿ, ಗುರುನಾಥ ಚವ್ಹಾಣ, ವಿಜಯಪುರ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದ, ತಹಶಿಲ್ದಾರ ಅನೀಲ ಢವಳಗಿ ಸೇರಿದಂತೆ ಹಲವು ಅಧಿಕಾರಿಗಳು ಮುಖಂಡರು ಇದ್ದರು.