ಉಪ ತಹಸೀಲ್ದಾರ ವರ್ಗಾವಣೆಗೆ ಆಗ್ರಹ

ಬೀದರ ,ಡಿ.3: ತಾಲ್ಲೂಕಿನ ಜನವಾಡ ಹೋಬಳಿಯ ಉಪ ತಹಸೀಲ್ದಾರ ಅಶೋಕ ರಾಜಗೀರ ಅವರÀನ್ನು ಬೀದರ ಜಿಲ್ಲೆಯಿಂದ ವರ್ಗಾವಣೆ ಮಾಡುವಂತೆ ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾ ಘಟಕ ಮತ್ತು ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಜನವಾಡ ಹೂಬಳಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಸಾರ್ವಜನಿಕರು ಆದಾಯ, ವೃದ್ಯಾಪ್ಯ ವೇತನ, ಪಡಿತರ ಚೀಟಿ ಮೊದಲಾದ ಅರ್ಜಿಯನ್ನು ಸಲ್ಲಿಸಿದರೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಅವರು ಹಾಕಿರುವ ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ. ಹಾಗೂ ಕೆಲವು ಸಾರ್ವಜನಿಕರ ಹತ್ತಿರ ಬಿ.ಪಿ.ಎಲ್ ಪಡಿತರ ಚೀಟಿ ಇದ್ದರೂ ಕೂಡ ಅವರನ್ನು ಅನರ್ಹಗೊಳಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.ವಿನೋದಕುಮಾರಶಿಂಧೆ,ಮಹೇಂದ್ರಕುಮಾರಹೊಸಮನಿ,ಸಾಯಿ ಶಿಂಧೆ,ಕೈಲಾಸವಿಳಾಸಪೂರ,ಬೀರಗೊಂಡಘೋಡಂಪಳ್ಳೆ ಅಲಿಯಂಬರ,ಸಂಗಮೇಶ ಭಾವಿದೊಡ್ಡಿ ಉಪಸ್ಥಿತರಿದ್ದರು.