ಉಪ ತಹಶಿಲ್ದಾರ ಅಶೋಕ ವರ್ಗಾವಣೆ ಆಗ್ರಹಿಸಿ ಪ್ರತಿಭಟನೆ ರ್ಯಾಲಿ

ಬೀದರ್:ಡಿ.31: ಜನವಾಡ ಉಪ ತಹಶಿಲ್ದಾರ ಅಶೋಕ ರಾಜಗೀರಾ ಅವರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಹಾಗೂ ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಶುಕ್ರವಾರ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಲಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಉಭಯ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾಲ್ಲೂಕಿನ ಜನವಾಡ ಹೂಬಳಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಸಾರ್ವಜನಿಕರು ಆದಾಯ, ಇಂದಿರಗಾಂಧಿ ರಾಷ್ಟ್ರೀಯ ವೃದ್ಯಾಪ್ಯನ ವೇತನ, ಸಂಧ್ಯಾ ಸುರಕ್ಷತ ವೃದ್ಯಾಪ್ಯನ ಅರ್ಜಿಯನ್ನು ಸಲ್ಲಿಸಿದರೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ನಾಡ ತಾಹಸೀಲ್ದಾರರಾದ ಅಶೋಕ ರಾಜಗೀರ ಅವರು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಕೆಲವು ಸಾರ್ವಜನಿಕರ ಹತ್ತಿರ ಬಿ.ಪಿ.ಎಲ್ ಪಡಿತರ ಚೀಟಿ ಇದ್ದರು ಕೂಡ ನಿಮ್ಮ ಹತ್ತಿರ ಎ.ಪಿ.ಎಲ್ ಪಡಿತರ ಚೀಟಿ ಇದೆ ಮತ್ತು ನಿಮ್ಮಾ ಆದಾಯ ಹೆಚ್ಚು ಇರುತ್ತದೆಂದು ತಿರಸ್ಕರಿಸಿ ಹಿಂಬರಹ ನೀಡುತ್ತಿದ್ದಾರೆ. ಜನವಾಡ ಹೂಬಳಿಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಹಾಕಿರುವ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಆದರೆ ಮಧ್ಯವರ್ತಿಗಳ ಹತ್ತಿರ ಹಣ ಪಡೆದು ಅನರ್ಹರ ಅರ್ಜಿಗಳು ಮಂಜೂರು ಮಾಡಿಕೊಡುತ್ತಿದ್ದಾರೆ. ಈಗಾಗಲೇ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಅಶೋಕ ಅವರ ಬಗ್ಗೆ ದೂರು ಸಲ್ಲಿಸಿದರೂ ಮನವಿ ಪತ್ರ ನೀಡಿ ಅವರ ಗಮನಕ್ಕೆ ತಂದರೂ ಸಹ ಅವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಅಶೋಕ ಅವರ ವರ್ಗಾವಣೆ ಮಾಡಿ ಜನವಾಡ ಹೋಬಳಿ ಜನರ ನೆಮ್ಮದಿ ಉಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಜಿಲ್ಲಾಧ್ಯಕ್ಷ ಸಂಗಮೇಶ ಭಾವಿದೊಡಿ,್ಡ ಪ್ರಮುಖರಾದ ವಿನೋದಕುಮಾರ ಶಿಂಧೆ, ಸೂರ್ಯಕಾಂತ ಸಾಧುರೆ, ವಿಜಯಕುಮಾರ ಜಡಗೆ, ಅನೀಲಕುಮಾರ ಮಡ್ಡೆ. ಬೀರಗೊಂಡ ಘೋಡಂಪಳ್ಳೆ, ಕೈಲಾಸ ವಿಳಾಸಪೂರ, ಧನರಾಜ ಮೇತ್ರೆ, ಗುರು ನೇಮತಾಬಾದ, ವೆಂಕಟ ಒಡೆಯರ್, ಅನೀಲಕುಮಾರ ಮಡ್ಡೆ, ವಿಶಾಲ ದೊಡ್ಡಿ, ಜೇಮ್ಸ್ ಮಮದಾಪೂರೆ, ರಾಜಕುಮಾರ ಗುಮ್ಮೆ, ವಿಜಯಕುಮಾರ ಜಡಗೆ, ಸೂರ್ಯಕಾಂತ ಸಾಧುರೆ, ಸೇರ ಅಲಿ, ವಿಜಯಕುಮಾರ ಜಡಗೆ, ಸೂರ್ಯಕಾಂತ ಸಾಧುರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.