ಉಪ ಜೀವನಕ್ಕಾಗಿ ಸಾಕಿದ್ದ ಐದು ಕುರಿ ಕಳ್ಳತನ

ಕಲಬುರಗಿ,ಆ.4-ಮಹಿಳೆಯೊಬ್ಬರು ಉಪ ಜೀವನಕ್ಕಾಗಿ ಸಾಕಿದ್ದ 5 ಕುರಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಆಜಾದಪುರ ರಸ್ತೆಯ ಉಮರ್ ಕಾಲೋನಿಯಲ್ಲಿ ನಡೆದಿದೆ.
ಉಮರ್ ಕಾಲೋನಿಯ ಶಕೀನಾ ಬೇಗಂ ಅಲಿಶೇಖ್ ಎಂಬುವವರು ಉಪ ಜೀವನಕ್ಕಾಗಿ ಮನೆಯ ಎರಡನೇ ಮಹಡಿಯಲ್ಲಿ 10 ಕುರಿಗಳ ಸಾಕಾಣಿಕೆ ಮಾಡಿದ್ದರು. ಅದರಲ್ಲಿ 5 ಕುರಿಗಳು ಎರಡನೇ ಮಹಡಿಯಿಂದ ಇಳಿದು ಕೆಳಗಡೆ ಮೇಯಲು ಹೋದಾಗ ಕಳ್ಳರು ಅವುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. 1 ಲಕ್ಷ ರೂಪಾಯಿ ಬೆಲೆ ಬಾಳುವ ಕಳ್ಳರು ಕಳವು ಮಾಡಿಕೊಂಡು ಹೋಗಲಾಗಿದ್ದು, ಈ ಸಂಬಂಧ ಶಕೀನಾ ಬೇಂಗ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.