ಉಪ ಚುನಾವಣೆ: 44 ಈ.ಕ.ರ.ಸಾ ಬಸ್‍ಗಳಲ್ಲಿ ಬಸವಕಲ್ಹಾಣಕ್ಕೆ ತೆರಳಿದ ಅಧಿಕಾರಿಗಳು, ಸಿಬ್ಬಂದಿ

ಬೀದರ ಏ.16: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ನಡೆಯುವ ಮತದಾನದ ವೇಳೆಯಲ್ಲಿ ಮತದಾನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿರುವ ಮತಗಟ್ಟೆ ಅಧಿಕಾರಿಗಳು, ಮೈಕ್ರೋ ವೀಕ್ಷಕರು ಸೇರಿದಂತೆ ಇನ್ನೀತರ ಸಿಬ್ಬಂದಿಯು ಬೀದರನಿಂದ 44 ಬಸ್ ಗಳ ಮೂಲಕ ಏಪ್ರೀಲ್ 16ರ ಬೆಳಗ್ಗೆ ಬಸವಕಲ್ಯಾಣಕ್ಕೆ ತೆರಳಿದರು.

ಬಸವಕಲ್ಯಾಣಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಕರೆದೊಯ್ಯುತ್ತಿರುವ ಕೆಎಸ್ ಆರ್ ಟಿ ಸಿ ಬಸ್ ಗಳು ಬೆಳಗ್ಗೆಯೇ ಹಳೆಯ ಬಸ್ ನಿಲ್ದಾಣದಲ್ಲಿ ಸಾಲುಸಾಲಾಗಿ ನಿಂತಿದ್ದವು.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯು ವಾಸ್ತವ್ಯಕ್ಕೆ ಬೇಕಾದ ಸಾಮಗ್ರಿಗಳೊಂದಿಗೆ ಬೆಳ್ಳಂಬೆಳಗ್ಗೆಯಿಂದಲೇ ಬೀದರನ ಹಳೆಯ ಬಸ್ ನಿಲ್ದಾಣದತ್ತ ಬರುತ್ತಿರುವುದು ಕಂಡು ಬಂದಿತು.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸಾರ ನಿಯಮ ಪಾಲನೆ ಮಾಡಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಸ್ ಏರಿಸಿ ಕಳುಹಿಸಲಾಯಿತು.

360ಕ್ಕೂ ಹೆಚ್ಚು ಮತಗಟ್ಟೆ ಅಧಿಕಾರಿಗಳು, 360ಕ್ಕೂ ಹೆಚ್ಚು ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೆÇೀಲಿಂಗ್ ಆಫೀಸರ್ ಮತ್ತು 50 ಮೈಕ್ರೋ ವೀಕ್ಷಕರು ಸೇರಿದಂತೆ ಇನ್ನೀತರರು ಬಸವಕಲ್ಯಾಣದ ತೇರು ಮೈದಾನದಲ್ಲಿ ನಡೆಯುವ ಮಸ್ಟರಿಂಗ್ ಕೇಂದ್ರಕ್ಕೆ ತೆರಳಿದರು.

ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ನಿರ್ದೇಶನದಂತೆ ಬೆಳಗ್ಗೆಯೇ ಹಳೆಯ ಬಸ್ ನಿಲ್ದಾಣದಲ್ಲಿ ಹಾಜರಿದ್ದ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಮತ್ತು ಚುನಾವಣಾ ಶಾಖೆಯ ಶಾಂತನು ಪೂರಂ ಮತ್ತು ಇನ್ನೀತರ ಸಿಬ್ಬಂದಿಯು, ಬಸ್ ನಿಲ್ದಾಣದತ್ತ ಒಬ್ಬೊಬ್ಬರಾಗಿ ಬರುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾಸ್ಕ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಿ ಬಸ್ ಹತ್ತಿಸಿ ಕಳುಹಿಸುವ ಕಾರ್ಯ ನಿರ್ವಹಿಸಿದರು.

ಕೆಎಸ್ ಆರ್ ಟಿಸಿಯಿಂದ ಅಗತ್ಯ ಸಹಕಾರ:

ಈ ಸಂದರ್ಭದಲ್ಲಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ

ಸಿ.ಎಸ್. ಪುಲೇಕರ, ವಿಭಾಗೀಯ ಸಂಚಾರ ಅಧಿಕಾರಿ ಆರ್ ಬಿ ಜಾದವ್, ಪ್ರಭು ಸ್ವಾಮಿ ಹಾಗೂ ಇತರರು ಬೆಳಗ್ಗೆಯಿಂದಲೇ ಬಸ್ ನಿಲ್ದಾಣದಲ್ಲಿ ಹಾಜರಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಸವಕಲ್ಯಾಣಕ್ಕೆ ಕರೆದೊಯ್ಯಲು

ಬಸ್ಸುಗಳ ವ್ಯವಸ್ಥೆ ಮಾಡಿಸಿ ಸಹಕರಿಸಿದರು.