ಉಪ ಚುನಾವಣೆ; ಯುವ ಪದಾಧಿಕಾರಿಗಳ ತಂಡ ರಚಿಸಿದ ರಕ್ಷಾರಾಮಯ್ಯ

ಬೆಂಗಳೂರು.ಏ.೩: ರಾಜ್ಯದಲ್ಲಿ ನಡೆಯುತ್ತಿರುವ ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಉಪ ಚುನಾವಣೆಯ ಪ್ರಚಾರದ ಅಖಾಡದಲ್ಲಿ ಪ್ರದೇಶ ಯುವ ಕಾಂಗ್ರೆಸ್ ನ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ದಂಡು ಸಕ್ರಿಯವಾಗಿ ತೊಡಗಿಕೊಂಡಿದೆ.
ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಅವರು ಚುನಾವಣಾ ಪ್ರಚಾರಕ್ಕಾಗಿ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು, ಕಾರ್ಯಕರ್ತರ ತಂಡಗಳನ್ನು ನಿಯೋಜಿಸಿದ್ದಾರೆ.ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಪ್ರಚಾರದಲ್ಲಿ ತೊಡಗಿಕೊಳ್ಳಲು ಕೆಪಿವೈಸಿಸಿ ಉಪಾದ್ಯಕ್ಷರಾದ ಭವ್ಯ ಕೆ.ಆರ್, ಜೆ.ಬಿ.ಎಂ. ಅಧ್ಯಕ್ಷ ಸಿರಿಲ್ ಪ್ರಭು, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಿನ್ ದೇಸಾಯಿ, ಪ್ರದೀಪ್ ಟಿ.ಎಸ್, ಅಭಿಷೇಕ್ ಎಸ್, ಅನಿಲ್ ಕುಮಾರ್ ಎಸ್, ಅಷಿಫುಲ್ಲಾ ಷರೀಫ್, ಚೈತ್ರ ವಿ, ಲಾವಣ್ಯಾ ಟಿ.ಎನ್, ಮಾರುತಿ ಎಸ್, ಪ್ರವೀಣ್ ಕುಮಾರ್ ಎಂ, ಸಂಯುಕ್ತ ಪಾಟೀಲ್, ಸಂದೀಪ್ ಕುಮಾರ್ ಎಚ್ ಎಸ್ , ಸವಿತಾ ಬಿ, ವಿನಯ್ ತಿಮ್ಮಾಪುರ್ , ವಿವೇಕ್ ಯಾವಗಲ್ ಅವರನ್ನು ನಿಯೋಜಿಸಲಾಗಿದೆ.
ಇವರ ಜತೆಗೆ ಕಾರ್ಯದರ್ಶಿಗಳಾದ ಮಹೇಶ್ ಜಲವಾಡಿ, ಹೆಚ್ ಎಂ ಜ್ಯೋತಿಷ್ , ಮಂಜುನಾಥ್ ಮಣಿ ಚೆಟ್ಟಿ , ಲೋಹಿತ್ ವಿ, ದಿಲಿಪ್ ಕುಮಾರ್ ಕೆ, ಆಶಿಕ್ ಗೌಡ ಕೆ, ನವೀನ್ ಕುಮಾರ್ ಎಸ್, ಬಾಲಾ ಪ್ರದೀಪ, ರಿಯಾನಾ ರಾಜು , ಚೇತನ್ ಲಿಂಗ್ ಡಿ, ಶ್ರೀಜಿತ್ ಡಿ.ಎಲ್, ಮೊಹಮ್ಮದ್ ರಫಿ ಜಿ.ಕೆ, ಗೋವರ್ಧನ್ ಜಿ.ಸಿ, ಆಕಾಶ್ ಕೋನೇರಿ, ಪ್ರವೀಣ್ ಶೆಲವಾಡಿ, ಸೌದಿಲ್ಲಾ ಷರೀಫ್, ಬಿ.ವೈ ಲೋಕೆಶ್, ದೀಪಕ್ ಕುಮಾರ್ ಎಸ್, ಪ್ರದೀಪ ಟಿ, ಇಲಾಹಿ ಸಿಖಂದರ್, ಮೊಹ್ಮದ್ ಇಮ್ರಾನ್, ಅಜಿತ್ ಶೆಟ್ಟಿ, ಬೆಳಗಾವಿ ನಗರದ ಜಿಲ್ಲಾಧ್ಯಕ್ಷ ಸೈಫ್ ಸೈಥ್. ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಕಾರ್ತಿಕ್ ಪಾಟಿಲ್, ಬಾಗಲಕೋಟೆ ಜಿಲ್ಲಾಧ್ಯಕ್ಷ ರಾಹುಲ್ ಕಲುಟಿ, ಬೆಂಗಳೂರು ಕೇಂದ್ರ ವಿಭಾಗದ ಅಧ್ಯಕ್ಷ ಆಗಸ್ಟಿನ್ ಎಂ, ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷ ದಿಲಿಪ್ ಕುಮಾರ್ ಎನ್.ಎಸ್, ಬಿಜಾಪುರ ಅಧ್ಯಕ್ಷ ಸಿದ್ದಪ್ಪ ಚಾಯಗೋಳ್ , ಚಿಕ್ಕಬಳ್ಳಾಪುರ ಅಧ್ಯಕ್ಷ ಮುದಾಸಿರ್ ಡಿ , ಚಿಕ್ಕೋಡಿ ಅಧ್ಯಕ್ಷ ಯಲ್ಲಪ್ಪ ಶಿಂಗೆ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಲುಕ್ವ್ಮನ್ ಭಂಟ್ವಾಳ್, ದಾವಣಗೆರೆಯ ನಿಖಿಲ್ ಕೊಂಡಜ್ಜಿ, ಧಾರವಾಡ ಗ್ರಾಮೀಣ ವಿನೋದ್ ಅಸುಟಿ, ಗದಗ್ ಅಶೋಕ್ ಮಂಡಾಲಿ, ಹಾವೇರಿ ಪ್ರಸನ್ನ ಹಿರೇಮಠ, ಹಬ್ಬಳ್ಳಿ ಧಾರವಾಡದ ನಗರದ ಇಮ್ರಾನ್ ಹುಸೇನ್ ಯಲಿಗಾರ್, ಮೈಸೂರು ಗ್ರಾಮಾಂತರ ಡೊನಾಲ್ಡ್ ನಿರ್ಮಾಣಿಕ್, ತುಮಕೂರು ಶಶಿಧರ್ ಟಿ.ಆರ್, ಉತ್ತರ ಕನ್ನಡದ ಸಂತೋಷ್ ಶೆಟ್ಟಿ, ಬೆಳಗಾವಿ ಗ್ರಾಮಾಂತರದ ಉಪಾಧ್ಯಕ್ಷರಾದ ಮರಿನಾಳ್ ಹೆಬ್ಬಾಳ್ಕರ್, ಚಿಕ್ಕೋಡಿ ಉಪಾಧ್ಯಕ್ಷರಾದ ಸಿದ್ದಿಕ್ ಅಂಕಲಗಿ, ದಾವಣಗೆರೆ ಸಾಗರ್ ಎಲ್.ಹೆಚ್ ಮತ್ತು ಶಿವಮೊಗ್ಗದ ಉಪಾಧ್ಯಕ್ಷರಾದ ಮಧುಸೂದನ್ ಸಿ.ಜಿ ಅವರನ್ನು ನಿಯೋಜಿಸಿದ್ದಾರೆ.