ಉಪ ಚುನಾವಣೆ :ಮಧ್ಯಾಹ್ನ ಕ್ಕೆ ಶೇ ೪೮% ಮತದಾನ

(ಸಂಜೆವಾಣಿ ವಾರ್ತೆ)
ಸಿಂಧನೂರು ಡಿ.೨೭- ನಗರದ ವಾರ್ಡ್ ಸಂಖ್ಯೆ ೨೨ ರಲ್ಲಿ ಉಪ ಚುನಾವಣೆಯ ಮತದಾನ ಮಧ್ಯಾಹ್ನ ಸಮಯಕ್ಕೆ ಶೇ ೪೮ % ರಷ್ಟು ಮತದಾನ ಆಗಿದ್ದು ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ ಶಾಂತಿಯುತ ಮತದಾನ ನಡೆದಿದೆಂದು ಚುನಾವಣಾಧಿಕಾರಿ ವಿರೇಶ ಗೋನ್ವಾರ ಮಾಹಿತಿ ನೀಡಿದರು.
ವಾರ್ಡ ಸಂಖ್ಯೆ ೨೨ ರಲ್ಲಿ ಬೂತ್ ಸಂಖ್ಯೆ ೨೨ ರಲ್ಲಿ ೩೮೩ ಮತಗಳು ಹಾಗೂ ಬೂತ್ ಸಂಖ್ಯೆ ೨೨ ’ಎ ’ರಲ್ಲಿ ೪೩೪ ಮತಗಳು ಚಲಾವಣೆ ಆಗಿದ್ದು ಮತದಾನ ಬಿರುಸಿನಿಂದ ನಡೆದಿದೆ.
ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮತದಾನಕ್ಕೆ ಸಮಯ ನಿಗದಿಯಾಗಿದ್ದು , ಒಟ್ಟು ೧೭೦೪ ಮತದಾರರಿದ್ದು ಮತದಾನ ಮಾಡಲು ಎರಡು ಬೂತ್ ಗಳನ್ನು ಅವಕಾಶ ಮಾಡಿಕೊಟ್ಟಿದ್ದು ಮತಗಟ್ಟೆ ೨೨ ರಲ್ಲಿ ಪಿ.ಆರ್.ಒ ಯರಿಯಪ್ಪ ಹಾಗೂ ಬೂತ್ ಸಂಖ್ಯೆ ೨೨ ಎ ರಲ್ಲಿ ಪಿ.ಆರ್.ಒ ಬಸಪ್ಪ ಹ್ಯಾಟಿ ಕರ್ತವ್ಯದಲ್ಲಿದ್ದರು.
ಕಣದಲ್ಲಿರುವ ನಾಲ್ಕು ಅಭ್ಯರ್ಥಿ ಗಳು ಹೆಚ್ಚು ಮತದಾನ ಆಗಲು ಮತದಾರರನ್ನು ನಿರಂತರವಾಗಿ ಬೂತ್ ಗಳಿಗೆ ಕರೆ ತರುವ ಪ್ರಯತ್ನ ದಲ್ಲಿರುವದು ಕಂಡುಬಂತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಗಮ ಮತದಾನ ನಡೆಯುವದಕ್ಕೆ ಸೂಕ್ತ ಬಂದ ಬಸ್ತ್ ವ್ಯವಸ್ಥೆ ಯನ್ನು ಪೋಲಿಸರು ಮಾಡಿದ್ದರು.