ಉಪ ಚುನಾವಣೆ: ಮದ್ಯಮಾರಾಟ ನಿಷೇಧ

ಕಲಬುರಗಿ,ಮಾ.25:ವಿವಿಧ ಕಾರಣಗಳಿಂದ ತೆರವಾದ ಕಲಬುರಗಿ ಜಿಲ್ಲೆಯ ಶಹಾಬಾದ ನಗರಸಭೆಯ ವಾರ್ಡ್ ಸಂಖ್ಯೆ 18ರ (ಲಕ್ಷ್ಮೀಗಂಜ್ ಮತ್ತು ಹರಳಯ್ಯ ನಗರ) ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮಾರ್ಚ್ 29 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಈ ಉಪಚುನಾವಣೆ ಜರುಗಲಿರುವ ಶಹಾಬಾದ ನಗರಸಭೆಯ (ನೀತಿ ಸಂಹಿತೆ ಜಾರಿಯಲ್ಲಿರುವ) ವ್ಯಾಪ್ತಿಯಲ್ಲಿ ಇದೇ ಮಾರ್ಚ್ 27ರ ಸಂಜೆ 5 ಗಂಟೆಯಿಂದ ಮಾಚ್ 30ರ ಬೆಳಗಿನ 6 ಗಂಟೆಯವರೆಗೆ ಎಲ್ಲಾ ತರಹದ ಮದ್ಯ ಮಾರಾಟ ನಿಷೇಧಿಸಿ ಹಾಗೂ ಅಂಗಡಿಗಳನ್ನು ಮುಚ್ಚಬೇಕೆಂದು ಕಲಬುರಗಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಅದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯಿತಿಗಳ ಉಪಚುನಾವಣೆ ಮದ್ಯ ಮಾರಾಟ ನಿಷೇಧ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಹಾಗೂ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮ ಪಂಚಾಯಿತಿಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮಾರ್ಚ್ 29 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಈ ಉಪಚುನಾವಣೆ ಜರುಗಲಿರುವ ಆಳಂದ ತಾಲೂಕಿನ ಭೂಸನೂರ ಹಾಗೂ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮ ಪಂಚಾಯಿತಿಗಳ ನೀತಿ ಸಂಹಿತೆಯು ಜಾರಿಯಲ್ಲಿರುವ ವ್ಯಾಪ್ತಿಯಲ್ಲಿ ಇದೇ ಮಾರ್ಚ್ 27ರ ಸಂಜೆ 5 ಗಂಟೆಯಿಂದ ಮಾಚ್ 30ರ ಬೆಳಗಿನ 6 ಗಂಟೆಯವರೆಗೆ ಎಲ್ಲಾ ತರಹದ ಮದ್ಯ ಮಾರಾಟ ನಿಷೇಧಿಸಿ ಹಾಗೂ ಅಂಗಡಿಗಳನ್ನು ಮುಚ್ಚಬೇಕೆಂದು ಕಲಬುರಗಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಅದೇಶ ಹೊರಡಿಸಿದ್ದಾರೆ.