ಉಪ ಚುನಾವಣೆ ನಂತರ ಕರ್ನಾಟಕದಲ್ಲಿ ಬಿಜೆಪಿ ಸಂಘಟನೆ ಇನ್ನಷ್ಟು ಬಲಪಡಿಸಲು ಕ್ರಮ: ಅರುಣಸಿಂಗ್

ಕಲಬುರಗಿ.ಏ.11:ಕರ್ನಾಟಕದಲ್ಲಿನ ಮೂರು ಕ್ಷೇತ್ರಗಳ ಉಪ ಚುನಾವಣೆಯ ನಂತರ ಬಿಜೆಪಿಯನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಕರ್ನಾಟಕದ ಉಸ್ತುವಾರಿ ಅರುಣಸಿಂಗ್ ಅವರು ಹೇಳಿದರು.
ನಗರದ ಉತ್ತರ ಮಂಡಲದ ವಾರ್ಡ್ ನಂಬರ್ 30ರಲ್ಲಿ ಭಾನುವಾರ ಕೊರೋನಾ ಲಸಿಕೆಯ ಉತ್ಸವವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇರುವುದು ನನ್ನ ಗಮನಕ್ಕೆ ಬಂದಿದೆ. ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕರೆ ಪಕ್ಷದ ಸಂಘಟನೆಗೆ ಇನ್ನಷ್ಟು ಬಲ ಬರುತ್ತದೆ. ಆ ದಿಸೆಯಲ್ಲಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ
ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಜನತಾ ಬಜಾರ್ ಅಧ್ಯಕ್ಷ ದತ್ತು ಫಡನಿಸ್, ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಮಂಜುನಾಥ್ ಕಳಸ್ಕರ್, ಸಂಗು ಮನ್ನಳ್ಳಿ, ಮಾಜಿ ಮೇಯರ್ ಧರ್ಮಪ್ರಕಾರ್ಶ ಪಾಟೀಲ್, ಸಾವಿತ್ರಿ ಕುಳಗೇರಿ, ಬಿ. ಜಯಸಿಂಗ್, ಕೃಷ್ಣನಾಯಕ್, ಸಂತೋಷ್ ಹುಡಗಿ, ವಿಜಯಕುಮಾರ್ ಹುಲಿ, ಮನೋಜ್ ಗುತ್ತೇದಾರ್, ಮಹದೇವ್ ತಂಬಾಕೆ, ದಿಗಂಬರ್, ಅಂಬ್ರೆಷ್, ಬಸವರಾಜ್ ವಡೆಯರ್, ಸುರೇಶ್ ಸಾರಕ್ಕಿ, ಅನಿಲ್ ಮುಂತಾದವರು ಉಪಸ್ಥಿತರಿದ್ದರು.