ಉಪ ಚುನಾವಣೆ ತಾ.ಪಂ. ಕಚೇರಿ:ನಾಮಪತ್ರ ಸಲ್ಲಿಕೆಗೆ ಅವಕಾಶ

ಮಸ್ಕಿ.ಮಾ.೨೩-ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಪಟ್ಟಣದ ವಾಲ್ಮೀಕಿ ಭವನ ಬಳಿಯ ತಾಲೂಕು ಪಂಚಾಯಿತಿ ಕಚೇರಿ ಮೇಲ್ಬಾಗದ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ ಮಸ್ಕಿ ತಾಲೂಕು ಕೇಂದ್ರ ರಚನೆಗೆ ಮುನ್ನ ಅಭ್ಯರ್ಥಿಗಳು ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಉಮೇದು ವಾರಿಕೆ ಸಲ್ಲಿಸುತ್ತಿದ್ದರು. ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ತಾ.ಪಂ. ಕಚೇರಿಯಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕಾರಣ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಲು ಲಿಂಗಸುಗೂರು ಪಟ್ಟಣಕ್ಕೆ ತೆರಳುವ ತಾಪತ್ರಯ ತಪ್ಪಿದೆ ಮಾ.೨೩ ರಂದು ಚುನಾವಣಾ ಅಧಿ ಸೂಚನೆ ಪ್ರಕಟ ಗೊಳ್ಳಲಿರುವ ಕಾರಣ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳು ಕಚೇರಿಯಲ್ಲಿ ಪೂರ್ವ ಭಾವಿ ಸಿದ್ದತೆಗಳನ್ನು ಕೈ ಗೊಳ್ಳುತ್ತಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಬೇಕಾಗಿರುವ ದಾಖಲೆ ಪತ್ರ, ಸಭೆ, ಸಮಾರಂಭಗಳ ಪರವಾನಿಗೆ ನೀಡಲು ಕಚೇರಿಯಲ್ಲಿ ಪ್ರತ್ಯೇಖ ವ್ಯವಸ್ಥೆ ಮಾಡಲಾಗಿದೆ ಈ ಮೊದಲು ಅಭ್ಯರ್ಥಿಗಳು ಸಭೆ, ಸಮಾರಂಭಗಳ ಪರವಾನಿಗೆ ಪಡೆಯಲು ಲಿಂಗಸುಗೂರು ಪಟ್ಟಣದ ಸಹಾಯಕ ಆಯುಕ್ತರ ಕಚೇರಿಗೆ ಅಲೆದಾಡ ಬೇಕಾಗಿತ್ತು.
ನಾಮಪತ್ರ ಸಲ್ಲಿಸಲು ಬೆಂಬಲಿಗರ ಪಡೆ ಕಟ್ಟಿಕೊಂಡು ವಾಹನಗಳ ಮೂಲಕ ಲಿಂಗಸುಗೂರಿಗೆ ತೆರಳಿ ನಾಮಪತ್ರ ಸಲ್ಲಿಸುವ ವೇಳೆ ಶಕ್ತಿ ಪ್ರದರ್ಶನ ಮಾಡಲು ಅಭ್ಯರ್ಥಿಗಳು ಸಾವಿರಾರು ರೂ ಖರ್ಜು ಮಾಡುತ್ತಿದ್ದರು ನಾಮಪತ್ರ ಸಲ್ಲಿಸಲು ತಾಲೂಕು ಕೇಂದ್ರ ಮಸ್ಕಿ ಪಟ್ಟಣದ ತಾ.ಪಂ. ಕಚೇರಿಯಲ್ಲಿ ವ್ಯವಸ್ಥೆ ಮಾಡಿರುವ ಕಾರಣ ಅಭ್ಯರ್ಥಿಗಳಿಗೆ ಸ್ವಲ್ಪ ಟೆನ್ಸನ್ ಕಮ್ಮಿಆಗಿದೆ.