ಉಪ ಖಜಾನೆ ಕಚೇರಿ ಉದ್ಘಾಟನೆ


ಮಸ್ಕಿ,ಡಿ.೨೪- ಇಲ್ಲಿಯ ಗುಂಡಳ್ಳಿ ಕಾಂಪ್ಲೆಕ್ಸ್ ನಲ್ಲಿ ತಾಲೂಕು ಉಪ ಖಜಾನೆ ಕಚೇರಿಯನ್ನು ಜಿಲ್ಲಾ ಖಜಾನಾಧಿಕಾರಿ ವಿ. ಹರಿನಾಥ್ ಬುಧವಾರ ಉದ್ಘಾಟಿಸಿದರು ಈ ವೇಳೆ ಮಾತನಾಡಿದ ಹರಿನಾಥ್ ಮಸ್ಕಿ ತಾಲೂಕು ಕೇಂದ್ರ ರಚನೆ ಯಾದ ನಂತರ ಪಟ್ಟಣದಲ್ಲಿ ಉಪ ಖಜಾನೆ ಆರಂಭಿಸಲು ಒತ್ತಡ ಇತ್ತು ಸರಕಾರದ ಆದೇಶ ದಂತೆ ಉಪ ಖಜಾನೆ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪುರಸಭೆ ಅಧ್ಯಕ್ಷೆ ವಿಜಯ ಲಕ್ಷ್ಮೀ ಪಾಟೀಲ್, ಉದ್ಯಮಿ ಅಂದಾನಪ್ಪ ಗುಂಡಳ್ಳಿ, ಬಸವಂತ ರಾಯ ಕುರಿ, ಬಸನಗೌಡ ಪಾಟೀಲ್, ಉಪ ಖಜಾನಾಧಿಕರಿ ಶರಣ ಬಸವ ಕರಡಕಲ್, ನಾಗರಾಜ ನಾಯಕ ಸೇರಿದಂತೆ ಅನೇಕ ಮುಖಂಡರಿದ್ದರು.