ಉಪ ಖಜಾನೆ ಕಚೇರಿ ಉದ್ಘಾಟನೆ-ಸರ್ಕಾರಿ ನೌಕರರ ಅಲೆದಾಡಿಸಬೇಡಿ

ಪ್ರಮಾಣಿಕವಾಗಿ ಕೆಲಸ ಮಾಡಿ- ಜಿ.ಲೋಕರೆಡ್ಡಿ
ಸಿರವಾರ.ಡಿ೨೪- ಸರ್ಕಾರಿ ನೌಕರರ ವೇತನ ಇನ್ನಿತರ ಕೆಲಸಗಳಿಗೆ ಮಾನ್ವಿಗೆ ತೆರಳಬೇಕಾಗಿತು, ಉಪ ಖಜಾನೆ ಕಚೇರಿ ಉದ್ಘಾಟನೆ(ಪ್ರಾರಂಭ) ಮಾಡಿರುವುದರಿಂದ ಮಾನ್ವಿಗೆ ಅಲೆದಾಡುವುದನ್ನು ತಪ್ಪಿಸಿದಂತಾಗಿದ್ದೆ, ಕಚೇರಿಯಲ್ಲಿ ಲಂಚ ಕೊಟ್ಟರೆ ಕೆಲಸ ಮಾಡಲಾಗುವುದು ಎಂಬ ವಿಳಂಭ ಮಾಡಬೇಡಿ ಪಾರದರ್ಶಕ ಆಡಳಿತ ಮಾಡಿ ಎಂದು ಜೆ.ಡಿ.ಎಸ್. ಮುಖಂಡ ಹಾಗೂ ವಾಣಿಜ್ಯೋದ್ಯಮಿ ಜಿ.ಲೋಕರೆಡ್ಡಿ ಹೇಳಿದರು.
ಪಟ್ಟಣದ ಲಿಂಗಸ್ಗೂರು ರಸ್ತೆಯಲ್ಲಿರುವ ವಾಸವಿ ಕಾಂಪ್ಲೇಕ್ಸ್‌ನಲ್ಲಿ ಸಿರವಾರ ಉಪ ಖಜಾನೆ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಾನ್ವಿ ತಾಲೂಕಿನಿಂದ ಸಿರವಾರ ತಾಲೂಕ ಬೇರ್ಪಟಿರುವುದರಿಂದ ಉಪ ಖಜಾನೆಗೆ ಸ್ಥಳಾಂತರವಾಗಬೇಕಾಗಿತು. ಅಧಿಕಾರಿಗಳ ನಿರ್ಲಕ್ಷ ಸಿಬ್ಬಂದಿಗಳ ಕೊರತೆಯಿಂದಾಗಿ ಇಷ್ಟು ದಿನ ವಿಳಂಭವಾಗಿದೆ. ಕಚೇರಿಗೆ ಅಗತ್ಯ ಸಿಬ್ಬಂದಿಗಳನ್ನು ವರ್ಗ ಮಾಡಿಸಿ, ಅಧಿಕಾರಿಗಳ ವೇತನ, ವಿವಿಧ ಮಾಸಾಶನಗಳ ಪಲಾನುಭವಿಗಳಿಗೆ ಜನರಿಗೆ ಸಕಾಲದಲ್ಲಿ ಸೇವೆ ನೀಡಿ. ಖಜಾನೆಯಲ್ಲಿ ಲಂಚ, ಕೆಲಸ ವಿಳಂಭ ಮಾಡುವುದನ್ನು ಮಾಡದೆ ಪಾರದರ್ಶಕ ಆಡಳಿತ ಮಾಡಿ ಎಂದರು.
ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ವಿ.ಹರಿನಾಥ ಬಾಬು ಮಾತನಾಡಿ ಖಜಾನೆ ಇಲಾಖೆಯಲ್ಲಿ ಸರ್ಕಾರಿ ನೌಕರರ, ವಿವಿಧ ಮಾಸಾಶನಗಳ ವೇತನ, ಗುತ್ತಿಗೆದಾರರ ಯಾವುದೇ ಕೆಲಸ ಕಾರ್ಯಗಳ ಕೆಲಸಗಳು ವಿಳಂಭ ಮಾಡದೆ ಪ್ರಾಮಾಣಿಕವಾಗಿ ಮಾಡಿ ನಾವು ಮಾಡುವ ಕೆಲಸದಿಂದ ಹೆಸರು ಗಳಿಸಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೇ. ನೌಕರರು ಸಾರ್ವಜನಿಕರು ಸಹಕರಿಸಬೇಕು ಎಂದರು.
ಸಿರವಾರ ತಾಲೂಕ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ ಏರೇಡ್ಡಿ ಮಾತನಾಡಿ ಸಿರವಾರ ತಾಲೂಕ ಕೇಂದ್ರವಾಗಿದ್ದೂ ಇನ್ನೂ ಅನೇಕ ಕಚೇರಿಗಳು ಮಾನ್ವಿಯಿಂದ ಬೇರ್ಪಟಿಲ್ಲನಮ್ಮ ನೌಕರರು ತಾವು ಕೆಲಸ ಮಾಡುವ ಕಚೇರಿಯಿಂದ ಸಿರವಾರ, ಸಿರವಾರದಿಂದ ಮಾನ್ವಿಗೆ ಅಲೇದಾಟವನ್ನು ಉಪಖಜಾನೆ ಕಚೇರಿ ಉದ್ಘಾಟಿಸಿರುವುದರಿಂದ ತಪ್ಪಿದಂತಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ ಮಾತನಾಡಿದ ಶಿಕ್ಷಕರ ವೇತನ ಇನ್ನಿತರ ದಾಖಲಾತಿಗಳನ್ನು ಖಜಾನೆಗೆ ತಲುಪಿಸಲು ಮಾನ್ವಿಗೆ ತೆರಳಲು ತೊಂದರೆಯಾಗುತ್ತಿತು. ಸಿರವಾರದಲ್ಲಿ ಪ್ರಾರಂಭಿಸಿವುದರಿಂದ ಅನುಕೂಲವಾಗಿದೆ ಎಲ್ಲಾ ಶಿಕ್ಷಕರ ಪರವಾಗಿ ಧನ್ಯವಾದಗಳು ಎಂದರು.
ಕಾರ್ಯಕ್ರಮದ ಕುರಿತು ಸಹಾಯಕ ನಿರ್ದೇಶಕರ ಶ್ರೀಕೃಷ್ಣ ಶಾಂತಗೇರಿ,ಎಟಿಓ ಶರಣಬಸವ, ತಾ.ಪಂ ಅಧ್ಯಕ್ಷ ದೇವರಾಜಕುರುಕುಂದಾ, ಲಿಂಗಸ್ಗೂರು ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಸಿರವಾರ ತಾ.ಪ್ರ. ಸಹಾಯಕ ನಿರ್ದೇಶಕ ವೆಂಕಟಾಚಲ, ಹರಿಪ್ರಸಾದ್, ನೌಕರರ ಸಂಘದ ಪ್ರ.ಕಾ ವೆಂಕಟೇಶ ಜಕ್ಕಲದಿನ್ನಿ, ಶಿಕ್ಷಕ ಸಂಘ ಕಾರ್ಯದರ್ಶಿ ಜಾವೀದ ಪಾಷ ಕುರ್ಡಿ, ಮುಖ್ಯಗುರುಗಳಾದ ಸುರೇಶ.ಡಿ, ರಾಜಶೇಖರದಿನ್ನಿ, ಮಂಜುಳಾ ಹೆಚ್, ಶಿವರಾಜಪ್ಪ, ನಿರ್ಮಲಾ, ದಿವ್ಯಾ, ರಾಜೇಶ್ವರಿ ಸೇರಿದಂತೆ ಇನ್ನಿತರರು ಇದ್ದರು.