ಉಪ ಕಾರಾಗೃಹದಲ್ಲಿ ಪರಿಪೂರ್ಣ ಚಾರಿಟೇಬಲ್ ಟ್ರಸ್ಟ ದಿಂದ ಯೋಗ ಶಿಬಿರ

ಹುಮನಾಬಾದ : ಡಿ.2:ಹುಮನಾಬಾದ ಪಟ್ಟಣದ ಉಪ ಕಾರಾಗೃಹದಲ್ಲಿ ಪರಿಪೂರ್ಣ ಚಾರಿಟೇಬಲ್ ಟ್ರಸ್ಟ(ರಿ) ಮತ್ತು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಬೆಂಗಳೂರ ಸಹಯೋಗದಲ್ಲಿ ಇಪ್ಪತ್ತೊಂದು ದಿನಗಳ ಉಚಿತ ಯೋಗ ತರಬೇತಿ ಕಾರ್ಯಕ್ರಮ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ತಿ ದೇವಿ ಉದ್ಘಾಟಿಸಿದರು ಬಳಿಕ ಮಾತನಾಡಿ. ಪ್ರತಿನಿತ್ಯ ಜಿನದಲ್ಲಿ ಯೋಗಾಸನವನ್ನು ಒಳ್ಳೆಯ ರೀತಿಯಿಂದ ಅಭ್ಯಾಸ ಮಾಡುವ ರೋಢಿ ಹಾಕಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ತಾವೆ ಕಾಪಾಡಿಕೊಳ್ಳಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಧೀಶ ಅಪ್ಪಾಸಾಬ ನಾಯಿಕ, ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಖ್ಯಾತ ಸಾಹಿತಿ ಪ್ರಾಧ್ಯಾಪಕಿ ಡಾ.ಜಯದೇವಿ ಗಾಯಕವಾಡ, ಕಾರಾಗೃಹದ ಅಧಿಕ್ಷಕ ಭೀಮಾಶಂಕರ ಜಮಾದಾರ, ಜೈಲು ವಾರ್ಡನ್ ಲಕ್ಷೀ ತ್ಯಾಪಿ, ಪರಿಪೂರ್ಣ ಚಾರಿಟೆಬಲ್ ಟ್ರಸ್ಟ ಅಧ್ಯಕ್ಷೆ ವಿಜಯಕುಮಾರಿ ಮಠದ, ಸಹಾಯಕ ಜೈಲರ್ ಬಸವರಾಜ ದಯಾಸಾಗರ, ಸಿದ್ಧಾರ್ಥ ಮಿತ್ರಾ. ಯೋಗ ಶಿಕ್ಷಕ ನಾಗೇಂದ್ರ ತಾಳಮಡಗಿ, ಚಂದ್ರಕಲಾ, ನಾಗೇಶ ಸೇರಿದಂತೆ ಅನೇಕರು ಇದ್ದರು.