ಉಪ ಕಾರಾಗೃಹದಲ್ಲಿ ಕೈದಿಗಳ ಸಮ್ಮುಖದಲ್ಲಿ ವಿಶ್ವ ಪರಿಸರ ದಿನಾಚರಣೆ

ಸೇಡಂ,ಜೂ,05: ಪಟ್ಟಣದ ಕಾರಾಗೃಹ ಹಾಗೂ ಸುಧಾರಣಾ ಸೇವೆಯ ತಾಲೂಕಾ ಉಪ ಕಾರಾಗೃಹದಲ್ಲಿಂದು ಸಾಮಾಜಿಕ ಅರಣ್ಯ ವಲಯ ಸೇಡಂ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಕೈದಿಗಳ ಸಮ್ಮುಖದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.ಈ ವೇಳೆಯಲ್ಲಿ ವಕೀಲರಾದ ವಸಂತ ಕುಮಾರ್ ಪೂಜಾರಿ, ಅರಣ್ಯ ಇಲಾಖೆ ಅಧಿಕಾರಿಗಳಾದ ಮಹೇಂದ್ರ ರೆಡ್ಡಿ, ಭೀಮಣ್ಣಾ ಗೌಡ, ಇಲಾಖೆ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ಕಾರಾಗೃಹದ ಅಧೀಕ್ಷಕರಾದ ವೀರಪ್ಪ ನಾಯಕ, ಸಹಾಯಕ ಜೈಲರ್ ಚಿದಾನಂದ ಬಡಿಗೇರ, ಸಿಬ್ಬಂದಿಗಳಾದ ಬಸಮ್ಮ ,ಪ್ರದೀಪ್ ಹಾಗೂ ಅರಣ್ಯ ಕಾವಲುಗಾರರಾದ ಕನಕಪ್ಪ,ಆಶಾಪ್, ಶಂಕರ್ ಸಂಜೆವಾಣಿ ವರದಿಗಾರ ಬಿಜನಳ್ಳಿ ಸುರೇಶ್ ಸೇರಿದಂತೆ ಕೈದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ದಿನಗಳಲ್ಲಿ ಪರಿಸರ ವಿರೋಧಿ ಕಾರ್ಖಾನೆಗಳು ಆರಂಭಿಸುವ ಮೂಲಕ ಗಿಡಮರಗಳ ನಾಶಪಡಿಸುತ್ತಿರುವುದರಿಂದ ಮಾನವಕುಲಕ್ಕೆ ನಷ್ಟವಾಗುತ್ತಿದೆ, ಪ್ರತಿ ಮರಗಳು ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಮರಗಳ ಬೆಳವಣಿಗೆಗೆ ಒತ್ತು ನೀಡುವುದು ಅತ್ಯವಶ್ಯಕವಿದೆ.

ವಸಂತಕುಮಾರ ಪೂಜಾರಿ

ವಕೀಲರು ಸೇಡಂ

ವಿಶ್ವಸಂಸ್ಥೆ ಪ್ರತಿ ವರ್ಷವೂ ವಿಶ್ವ ಪರಿಸರ ದಿನಾಚರಣೆ ಎಂದು ತನ್ನದೇ ಆದ ಸ್ಲೋಗನ್ ವರಹಾಕುತ್ತದೆ ಅದರಂತೆ ಈ ಬಾರಿ “ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವುದು”ಮಹತ್ವ ನೀಡಿದ್ದೆ, ಈ ಬಾರಿ ಕಾರ್ಯಗೃಹದಲ್ಲಿ ಸಸಿಗಳನ್ನು ಹಚ್ಚುವ ಮುಖ್ಯ ಉದ್ದೇಶ ಇಷ್ಟೇ, ಪ್ರತಿಯೊಬ್ಬ ಕೈದಿಗಳು ಗಿಡಗಳ ಮಹತ್ವವನ್ನು ಅರಿತು ಸನ್ನಡತೆಗೆ ತೆರಳಲ್ಲಿ ಎಂಬುದು,

ಮೋಹನ್ ರೆಡ್ಡಿ
ಅಧಿಕಾರಿಗಳು ಅರಣ್ಯ ಇಲಾಖೆ ಸೇಡಂ