ಉಪ ಆರೋಗ್ಯ ಕೇಂದ್ರದಲ್ಲೂ ಕೋವಿಡ್ ಲಸಿಕೆ ವಿತರಣೆ ಆರಂಭ

ಆಳಂದ ;ಏ.4: ತಾಲೂಕಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಕೊವಿಡ್ ಲಸಿಕೆ ನೀಡಲು ಆರಂಭಿಸಲಾಗಿದೆ ಆದರೆ ಇನ್ನು ಸಾರ್ವಜನಿಕರಿಗೆ ಮುಟ್ಟಿಸಲು ಆರೋಗ್ಯ ಉಪಕೇಂದ್ರಲ್ಲೂ ಕೂಡಾ ಲಸಿಕೆ ವಿತರಣೆಗೆ ಚಾಲನೆ ನೀಡಲಾಗಿದೆ. ಅದರಂತೆ ತಾಲೂಕಿ ಜಮಗಾ(ಜೇ) ಗ್ರಾಮದ ಉಪಕೇಂದ್ರದಲ್ಲಿ ಕೊವಿಡ್ ಲಸಿಕೆ ವಿತರಣೆಗೆ ಚಾಲನೆ ನೀಡಲಾಯಿತು.ಲಸಿಕಾ ವಿತರಣಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ಪ್ರತಿಕ ಜ್ಯೋಶಿ 45 ಮೆಲ್ಪಟ್ಟರಿಗೆ ಉಚಿತವಾಗಿ ಕೋರೊನಾ ಲಸಿಕೆ ನೀಡಲಾಗುತ್ತಿದೆ. ಇದರಿಂದ ಯಾವುದೆ ಅಡ್ಡ ಪರಿಣಾಮವಿಲ್ಲ ಸಾರ್ವಜನಿಕರು ತಪ್ಪಾಗಿ ಗ್ರಹಿಸಬಾರದು ಕೊರೊನಾ ಸೊಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಲಸಿಕೆ ಪಡೆಯುದು ಒಂದೆ ಮಾರ್ಗವಾಗಿದೆ ಹೀಗಾಗಿ ಆರೋಗ್ಯ ಇಲಾಖೆ ಉಪಕೇಂದ್ರದಲ್ಲೂ ಲಸಿಕೆ ನೀಡಲು ಪ್ರಾರಂಭಿಸಿದೆ ಸಾರ್ವಜನಿಕರು ಇದರು ಉಪಯೋಗ ಪಡೆದು ಕೊರೊನಾ ನಿಯಂತ್ರಿಸಲು ಸಹಕರಿಸಬೇಕು ಎಂದರು.ಗ್ರಾ.ಪಂ ಅಧ್ಯಕ್ಷ ಸಿದ್ದರಾಮ ಯಾದವಾಡ ಪಿಡಿಓ ರಾಮದಾಸ ಮುಖಂಡರಾದ ಶ್ರೀಶೈಳ ಮುಲಗೆ ಸಂಜಕುಮಾರ ಅರೆ ಹಾಗೂ ಆರೋಗ್ಯ ಸಿಬ್ಬಂದಿ ಶ್ರೀಶೈಲ್ ಕುಡಕಿ ಚಂದ್ರಕಾಂತ ಪಾಟೀಲ ಸುರ್ವರ್ಣ ಕೌಶಲ್ಯ ಮಾಳಗೆ ಪ್ರಶಾಂತ ಅಷ್ಟಗಿ ಅಶ್ವಿನಿ ಪಾಟೀಲ ಆಶಾಕಾರ್ಯರ್ತರು ಇದ್ದರು.