ಉಪ್ಪಿ ಹೊಸ ದಾಖಲೆ

ಕೊರೊನಾ ಸಂಕಷ್ಟದ ಸಮಯದಲ್ಲಿ ದಾನಿಗಳ ಜೊತೆಗೂಡಿ ಅಗತ್ಯ ದಿನಸಿ ಕಿಟ್ ವಿತರಣೆಯಲ್ಲಿ ತೊಡಗಿರುವ ನಟ,ನಿರ್ದೇಶಕ ಉಪೇಂದ್ರ ಅವರು ಇದೀಗ ಹೊಸದೊಂದು ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ನಿರ್ದೇಶಕ ಆರ್ ಚಂದ್ರು ಅವರ ಜೊತೆ ಕಬ್ಜ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಲಗಾಮ್, ಬುದ್ದಿವಂತ-2 ಸೇರಿದಂತೆ ಇನ್ನೂ ಹಲವು ಚಿತ್ರಗಳು ಕೈಯಲ್ಲಿವೆ.

ಈ ನಡುವೆಯೇ ಉಪೇಂದ್ರ ಅವರ ಖಾತೆಗೆ ಹೊಸದೊಂದು ದಾಖಲೆ ಸೇರಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ 1 ಲಕ್ಷ ಫಾಲೋಅರ್ ಹೊಂದುವ ಮೂಲಕ ಎರಡನೇ ಸ್ಥಾನ ಪಡೆದಿದ್ಧಾರೆ. ಮೊದಲ ಸ್ಥಾನದಲ್ಲಿ ನಟ ಕಿಚ್ಚ ಸುದೀಪ್ ಮತ್ತು ಮೂರನೇ ಸ್ಥಾನದಲ್ಲಿ ದರ್ಶನ್ ಇದ್ದಾರೆ.

ಸುದೀಪ್ ಅವರು 2.5 ದಶಲಕ್ಷ ಹಿಂಬಾಲಕರನ್ನು ಹೊಂದಿದ್ಧಾರೆ ಇದೀಗ ಉಪೇಂದ್ರ ಅವರು ಹತ್ತು ಲಕ್ಷ ಹಿಂಬಾಲಕರನ್ನು ಹೊಂದಿದ್ದು ನಟ ದರ್ಶನ್ ಅವರು ನಂತರದ ಸ್ಥಾನದಲ್ಲಿದ್ದಾರೆ. ಉಪ್ಪಿಯ ಹೊಸ ದಾಖಲೆಗೆ ಅಭಿಮಾನಿಗಳು ಫಿಧಾ ಆಗಿದ್ಧಾರೆ.

ಎಷ್ಟು ಜನರ ಹಿಂಬಾಲಕರು ಇದ್ದಾರೆ ಎನ್ನುವುದಕ್ಕಿಂತ ಸದಾ ಒಂದಿಲ್ಲೊಂದು ವಿಷಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ನಟರು ಸಕ್ರಿಯರಾಗಿದ್ದಾರೆ.