ಬೀದರ:ಅ.11:ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ನಿವೃತ್ತ ಅಧಿಕಾರಿ ವೀರಭದ್ರಪ್ಪ ನವರು ವಿವಿಧ ರಂಗಗಳಲ್ಲಿ ಮಾಡಿದ ಚಟು ವಟಿಕೆಗಳನ್ನು ಪರಿಗಣಿಸಿ, ಕರ್ನಾಟಕ ರಾಜ್ಯ ಸರ್ಕಾರವು ಸಮಾಜ ಸೇವೆ ಕ್ಷೇತ್ರದಲ್ಲಿ, ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಮಂಜೂರು ಮಾಡಿ ರುವುದು ವಿಶ್ವ ವಿದ್ಯಾಲಯ ಅಲ್ಲದೆ ಇಡೀ ಬೀದರ್ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ ಎಂ.ಕೆ. ತಾoದಳೆಯವರು ಅಭಿಪ್ರಾಯ ಪಟ್ಟರು. ಇತ್ತೀಚೆಗೆ ರಾಜ್ಯ ಪ್ರಶಸ್ತಿ ಪುರಸ್ಕøತರಾದ ವೀರಭದ್ರಪ್ಪ ಉಪ್ಪಿನ ರವರಿಗೆ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯದಲ್ಲಿ ಗೌರವ ಸನ್ಮಾನ ನೀಡಿ ಮಾತ ನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪ್ಪಿನ್ ರವರು ಸಮಸ್ತ ಹಿತ ಚಿಂತಕರ ಸಹಯೋಗದಿಂದ ಒಂದಿಷ್ಟು ಅಳಿಲು ಸೇವೆ ಸಲ್ಲಿಸಿರುವ ನನಗೆ ಕರ್ನಾಟಕದ ಘನ ಸರ್ಕಾರವು ಗುರ್ತಿಸಿ, ರಾಜ್ಯ ಪ್ರಶಸ್ತಿಯನ್ನು ನೀಡಿರುವುದು ಸಂತಸದ ಸಂಗತಿಯಾಗಿದೆ. ಇದು ಬೀದರ್ ಜನತೆಗೆ ಸಂದ ಗೌರವವಾಗಿದೆ ಎಂದು ನುಡಿ ದರು. ಅರವಿಂದ್ ಕುಲಕರ್ಣಿ ಯವರು ಮುಖ್ಯ ಅತಿಥಿಗಳಾ ಗಿದ್ದರು. ಉಪ ಕುಲಸಚಿವ ರಾದ ದೇವೇಂದ್ರ, ಹಿರಿಯ ಆಪ್ತ ಕಾರ್ಯದರ್ಶಿಗಳಾದ ನಾಗಭೂಷಣ್ ಹುಗ್ಗೆ, ನಾಗೇಂದ್ರ, ಸೋಮೇಶ್ವರ್, ಪ್ರಭುಸಿಂಗ್ ಪವಾರ್, ಅಮೃತ್ ಶೇರಿಕಾರ, ಶರಣಪ್ಪ ಖೇಡಕರ್, ಲೋಕನಾಥ್, ಮಾರುತಿ ಅಶೋಕ್ ಬೀರಾದಾರ್, ಸಂಜೀವಕುಮಾರ್ ಮುಂತಾ ದವರು ಹಾಜರಿದ್ದರು.