ಉಪ್ಪಾರ ಹೊಸಹಳ್ಳಿಯಲ್ಲಿ ಶಾಲಾ ವಾರ್ಷಿಕೋತ್ಸವ


ಸಂಜೆವಾಣಿ ವಾರ್ತೆ
ಸಿರುಗುಪ್ಪ:ಮಾ,1- ಉಪ್ಪಾರ ಹೊಸಹಳ್ಳಿ ಕ್ಲಸ್ಟರಿನ ರಾಷ್ಟ್ರೀಯ ವಿದ್ಯಾನಿಕೇತನ ಕಿರಿಯ/ಹಿರಿಯ ಪ್ರಾಥಮಿಕ ಶಾಲೆ. ಉಪ್ಪಾರ ಹೊಸಹಳ್ಳಿಯಲ್ಲಿ 20ನೇ ಶಾಲಾ ವಾರ್ಷಿಕೋತ್ಸವ ಹಾಗೂ ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ ಪ್ರ ಸಿದ್ಧೇಶ್ವರ ಸ್ವಾಮಿಗಳು.  ಮರಿಶಿವಯೋಗಿಗಳ ಮಠ. ಹಳೇಕೋಟೆ.  ಇವರು ಮಾತನಾಡಿ, ಮಕ್ಕಳಗೆ ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳಸಬೇಕೆಂದು ತಿಳಿಸುತ್ತಾ,  ರೈತರನ್ನು ಹಾಗೂ ಸೈನಿಕರನ್ನು ಪ್ರತಿದಿನ ಊಟದ ಸಮಯದಲ್ಲಿ ನೆನೆಯಬೇಕೆಂದು ತಿಳಿಹೇಳಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ತಮ್ಮನಗೌಡ ಪಾಟೀಲ್.
ಕ್ಷೇತ್ರ ಸಮನ್ವಯಾಧಿಕಾರಿ. ಸಿರುಗುಪ್ಪ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸಿಬ್ಬಂದಿ ಹಾಗೂ ಊರಿನ ಪೋಷಕ ಬಂಧುಗಳು ಕಾರ್ಯಕ್ರಮದಲ್ಲಿ ಇದ್ದರು.