ಉಪ್ಪಾರ ಸಮುದಾಯದವನ್ನು ಎಸ್ಸಿ, ಎಸ್ಟಿಗೆ ಸೇರ್ಪಡೆ ಮಾಡಲು ಒತ್ತಾಯ

ರಾಯಚೂರು,ನ.೭- ಉಪ್ಪಾರ ಸಮುದಾಯದವನ್ನು ಎಸ್ಸಿ ಅಥವಾ ಎಸ್ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಮಹರ್ಷಿ ಭಗೀರಥ ಸೇವಾ ಸಂಘ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಉಪ್ಪಾರ ಸಮುದಾಯ ರಾಜ್ಯದಲ್ಲಿ ಸುಮಾರು ೫೦ ಲಕ್ಷ ಜನಸಂಖ್ಯೆವುಳ್ಳ ಅತಿ ಹಿಂದುಳಿದ ಸಮಾಜ ವಾಗಿದೆ. ಅನೇಕ ದಶಕಗಳಿಂದಲೂ ಪರಿಶಿಷ್ಟ ಜಾತಿಗೆ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಅನೇಕ ಸಮಾವೇಶ ಮಾಡಿ ಹೋರಾಟ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಪ್ಪಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಾಲ್ಕು ವರ್ಷಗಳ ಕಾಲ ನಡೆಸಿ, ವರದಿಯನ್ನೂ ಈಗಾಗಲೇ ದೇವರಾಜ ಅರಸು ಸಂಶೋಧನೆ ಸಂಸ್ಥೆಯ ನಿರ್ದೇಶಕರಿಗೆ ಸಲ್ಲಿಸಲಾಗಿದೆ ಎಂದರು. ಉಪ್ಪಾರ ಸಮಾಜದ ಉಪಜಾತಿ ಕೂಸರು, ಮಂಡಾಲರು,ಮತ್ತು ಭಟದಾ ಜಾತಿಗಳಿರುವವರು ಕಾರವಾರ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಗಾಗಲೇ ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಉಪ್ಪಾರ ಜನಾಂಗದ ಅಭಿವೃದ್ಧಿಗಾಗಿ ಪ್ರವರ್ಗ ೧ರ ಬದಲು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ, ಅಮರೇಶ, ಬುಗ್ಗಾರೆಡ್ಡಿ, ರಾಮಪ್ಪ, ಈರೇಶ, ಡಿ. ಕೆ ರವಿ, ಸತ್ಯನಾರಾಯಣರೆಡ್ಡಿ, ಶರಣಪ್ಪಗೌಡ ಸೇರಿದಂತೆ ಉಪಸ್ಥಿತರಿದ್ದರು.