ಉಪ್ಪಾರ ಸಮಾಜ ಸೇವಾ ಸಂಘಕ್ಕೆ ಸದಸ್ಯರಾಗಲು ಡಿ.೩೧ ಕೊನೆಯ ದಿನ

ರಾಯಚೂರು,ನ.೨೨- ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘಕ್ಕೆ ಸದಸ್ಯರಾಗಲು ೩೧-೧೨- ೨೦೨೨ ಕೊನೆ ದಿನವಾಗಿದೆ ಎಂದು ಜಿಲ್ಲಾಧ್ಯಕ್ಷ ವೆಂಕೋಬ ಉಪ್ಪಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಅಮರೇಶ ಆದೋನಿ,ಎಂ.ಸುಭಾಶಚಂದ್ರ ಎಸ್. ಶ್ರೀನಿವಾಸ ಈ ಮೂರು ವ್ಯಕ್ತಿಗಳು ಸಮಾಜದ ಹಾದಿ ತಪ್ಪಿಸುತ್ತಿದ್ದು ಸಮಾಜದ ಚುನಾವಣೆಗೆ ನಡೆಯುತ್ತಿರುವುದಾಗಿ ಪ್ರಚಾರ ಮಾಡುತ್ತಿರುವುದು ಕಾನೂನುಬಾಹಿರ, ಅವರು ಪ್ರಚುರಪಡಿಸಿದ ಮಾಹಿತಿಯು ಅನೂರ್ಜಿತ ಹಾಗೂ ಸಂಘದ ಬೈಲಾದ ವಿರುದ್ಧವಾಗಿರುತ್ತದೆ ಎಂದು ಹೇಳಿದ ಅವರು, ಈ ಮೂವರು ಸಂಘದ ಸದಸ್ಯರಾಗಿದ್ದು ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕೈಬಿಟ್ಟು ಒಂದೆಡೆ ಕಲಿತು ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಈಗಾಗಲೇ ಅಧಿಕೃತವಾಗಿ ನೋಂದಣಿಯಾಗಿರುವ ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘವು ಕಳೆದ ಸೆ.೧೮ ರಂದು ಸಂಘದ ಸದಸ್ಯರ ಸಭೆಯನ್ನು ಕರೆದು ಸಂಘದ ಸದಸ್ಯರಾಗಲು ಬಯಸುವವರು ದಿ.೩೧-೧೨-೨೦೨೨ ರ ಒಳಗೆ ಸಂಘವನ್ನು ಸಂಪರ್ಕಿಸಬೇಕು.ನೋಂದಣಿಯಾದ ಸದಸ್ಯರ ಪಟ್ಟಿಯನ್ನು ಡಿಸೆಂಬರ್ ನಂತರ ಸದಸ್ಯರ ಯಾದಿಯನ್ನು ಬಿಡುಗಡೆ ಮಾಡಿ ಸಹಕಾರ ಸಂಘಗಳ ಉಪನಿಬಂಧಕರ ಅಡಿಯಲ್ಲಿ ಚುನಾವಣೆಯ ಪ್ರಕ್ರಿಯೆ ನಡೆಸಲಾಗುವುದೆಂದು ಸ್ಪಷ್ಟಪಡಿಸಿದರು.
ಪ್ರಧಾನ ಕಾರ್ಯದರ್ಶಿ ಎಮ್. ಚಂದ್ರಮೌಳಿ, ಡಿ. ನಾರಾಯಣಪ್ಪ ಇದ್ದರು.