ಉಪ್ಪಾರ ಸಮಾಜವನ್ನು ಎಸ್ಸಿ ಇಲ್ಲವೇ ಎಸ್ಟಿಗೆ ಸೇರಿಸಲು ಒತ್ತಾಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಆರ್ಥಿಕವಾಗಿ ತೀರ ಹಿಂದುಳಿದಿರುವ ಉಪ್ಪಾರ ಸಮುದಾಯವನ್ನು ಎಸ್ಸಿ ಅಥವಾ ಎಸ್ಟಿ ವರ್ಗಕ್ಕೆ ಸೇರಿಸಬೇಕೆಂದು ಕರ್ನಾಟಕ ಭಗೀರಥ ಮಹಾಸಭಾ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದೆ.
ಮಹಾಸಭಾದ ರಾಜ್ಯ ಅಧ್ಯಕ್ಷ ಯು.ಉರುಕುಂದಪ್ಪ ನಗರದಲ್ಲಿಂದು ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ಕೂಡಲೇ ಬಲಾಢ್ಯ ಸಮುದಾಯಗಳ ಹಿತಕಾಯುವುದಷ್ಟೆ ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯಗಳಿಗೆ ಮಹತ್ವ ನೀಡಬೇಕು, ಶಿಕ್ಷಣ, ರಾಜಕೀಯ, ಉದ್ಯೋಗ ಕ್ಷೇತ್ರದಲ್ಲಿ ಹಿಂದುಳಿದಿರುವ ಉಪ್ಪಾರ ಸಮುದಾಯದ ಶಾಸ್ತ್ರೀಯ ಅಧ್ಯಯನ ನಡೆಸಿ ನಮ್ಮ ಸಮಾಜಕ್ಕೂ ರಾಜಕೀಯವಾಗಿ ಪ್ರಾಧಾನ್ಯತೆ ನೀಡಬೇಕಿದೆ.
ನಮ್ಮ ಸಮುದಾಯ ಈ ವರೆಗೆ ಕೇವಲ ಶೇ.3ರಷ್ಟು ಮತ್ತು ಶಿಕ್ಷಣ ಪಡೆದಿದೆ ಸಮಾನತೆ ಇದ್ದರೂ ಮೇಲ್ವರ್ಗ ನಮ್ಮನ್ನು ಕೀಳಾಗಿ ಕಾಣುತ್ತಿದೆ. ಅದಕ್ಕಾಗಿ ನಮ್ಮನ್ನು ಸಹ ಎಸ್ಸಿ ಇಲ್ಲವೇ ಎಸ್ಟಿ ಸಮುದಾಯಕ್ಕೆ ಸೇರಿಸಿ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆಂದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಆಡಳಿತದ ಕೊನೆ ದಿನಗಳಲ್ಲಿ ನಮ್ಮ ಸಮುದಾಯಕ್ಕೂ ನ್ಯಾಯ ದೊರಕಿಸಿಕೊಡಲು ಈ ಕಾರ್ಯ ಮಾಡಿ ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ನರಸಣ್ಣ, ಕಾಳಿಂಗ ರಾಜು, ಮಲ್ಲಪ್ಪ, ಸಣ್ಣ ಭೀಮಣ್ಣ, ಮೊದಲಾದವರು ಇದ್ದರು.