ಉಪಾಸನೆ ತಾತ್ಕಾಲಿಕವಾಗಿ ರದ್ದು

ದಾವಣಗೆರೆ, ಏ.೨೬; ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಸಂಸ್ಥೆ ಪ್ರತೀ ತಿಂಗಳು ಹುಣ್ಣಿಮೆಯಂದು ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ನಡೆಯುವ ಶ್ರೀ ಗಾಯತ್ರಿ ಸಾಮೂಹಿಕ ಪೂಜೆ, ಉಪಾಸನೆ ಕಾರ್ಯಕ್ರಮವನ್ನು ಕೋವಿಡ್-19ರ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ .ನಾಳೆ ಚಿತ್ತಾ ಪೂರ್ಣಿಮಾ ಅಂಗವಾಗಿ ಹಮ್ಮಿಕೊಳ್ಳಲಾದ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ ರದ್ದುಗೊಳಿಸಲಾಗಿ ಕರೋನಾದ ನಿಯಂತ್ರಣಕ್ಕೆ ಬಂದ ಮೇಲೆ ಮುಂದಿನ ತಿಂಗಳು ಮತ್ತೆ ಪೂಜೆಯ ಪ್ರಾರಂಭದ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುವುದಾಗಿ ಪರಿವಾರದ ಅಧ್ಯಕ್ಷರಾದ ಡಾ.ಸುಶೀಲಮ್ಮ ತಿಳಿಸಿದ್ದಾರೆ