
ಲಕ್ಷ್ಮೇಶ್ವರ,ಮಾ.5: ತಾಲೂಕಿನ ಬಾಲೆ ಹೊಸೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು.
ಉಪಾಧ್ಯಕ್ಷ ಸ್ಥಾನಕ್ಕೆ ಫಕೀರಯ್ಯ ಶಿವಯೋಗಯ್ಯ ಹಿರೇಮಠ ಮತ್ತು ನಾಗಪ್ಪ ತೀರ್ಕಪ್ಪ ಸಣ್ಣ ತೋಟಗೇರ್ ನಾಮಪತ್ರ ಸಲ್ಲಿಸಿದರು. ಚುನಾವಣೆ ಅಧಿಕಾರಿಯಾಗಿದ್ದ ಕಾರ್ಯನಿರ್ವಾಹಕ ಅಧಿಕಾರಿ ಎಂವಿ ಬಡಿಗೇರವರು ನಾಮಪತ್ರ ಪರಿಶೀಲಿಸಿ ಕ್ರಮಬದ್ಧವಾಗಿದೆ ಎಂದು ಘೋಷಿಸಿ ಮತದಾನಕ್ಕೆ ಅವಕಾಶ ನೀಡಿದರು.
ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ತಮ್ಮ ಮತಗಳನ್ನು ಚಲಾಯಿಸಿದರು. ಮತಗಳ ಎಣಿಕೆ ಜರಗಿ ನಾಗಪ್ಪ ತಿರುಕಪ್ಪ ಸಣ್ಣ ತೋಟಗೇರಿ ಎಂಟು ಮತಗಳನ್ನು, ಫಕೀರಯ್ಯ ಶಿವಯೋಗಯ ಹಿರೇಮಠ ಏಳು ಮತಗಳನ್ನು ಪಡೆದರು.
ಎಂಟು ಮತಗಳನ್ನು ಪಡೆದ ನಾಗಪ್ಪ ಸಣ್ಣ ತೋಟಗೇರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರನ್ನು ಅಧ್ಯಕ್ಷರು ಸರ್ವ ಸದಸ್ಯರು ಅಭಿನಂದಿಸಿದರು.