ಉಪಾಧ್ಯಕ್ಷರಿಂದ ಎನ್‌ಎಸ್‌ಬಿ – ನಾಯಕರಿಗೆ ಸನ್ಮಾನ

ರಾಯಚೂರು.ನ.09- ನಗರಸಭೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಕಾರಣೀಭೂತರಾದ ಕಾಂಗ್ರೆಸ್ ಮುಖಂಡರ ನಿವಾಸಕ್ಕೆ ತೆರಳಿ, ಮಾಡಗಿರಿ ನರಸಿಂಹಲು ಅವರು ಸನ್ಮಾನಿಸಿದರು.
ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಅವರಿಗೆ ವಾರ್ಡ್ 20 ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ವಾರ್ಡಿನ ನರಸಮ್ಮ ನರಸಿಂಹಲು ಮಾಡಗಿರಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ಬೋಸರಾಜು ಅವರಿಗೆ ಶಾಲು ಹಾಕಿ ಮಾಲಾರ್ಪಣೆ ಮಾಡಿ, ಸಂತಸ ವ್ಯಕ್ತಪಡಿಸಿದರು. ಇದೇ ರೀತಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಅವರಿಗೂ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಮಾಡಗಿರಿ ನರಸಿಂಹಲು, ನಗರಸಭೆ ಸದಸ್ಯರಾದ ಬಿ.ರಮೇಶ ಸೇರಿದಂತೆ ವಾರ್ಡ್ 20 ರ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.