ಉಪಾಧ್ಯಕ್ಷರಾಗಿ ಬಣಕಾರ ಅವಿರೋಧ ಆಯ್ಕೆ

ಬ್ಯಾಡಗಿ,ಆ30: ತಾಲೂಕಿನ ಕುಮ್ಮೂರು ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ನೆಲ್ಲಿಕೊಪ್ಪ ಗ್ರಾಮದ ಗ್ರಾಪಂ ಸದಸ್ಯ ಚನಬಸಪ್ಪ ನಾಗಪ್ಪ ಬಣಕಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಿಂದಿನ ಉಪಾಧ್ಯಕ್ಷ ಮಾರುತಿ ಕಾಳಪ್ಪನವರ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಚನಬಸಪ್ಪ ಬಣಕಾರ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಅವರು ಚನಬಸಪ್ಪ ಬಣಕಾರ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಈ ಚುನಾವಣೆಯ ಪ್ರಕ್ರಿಯೆಯಲ್ಲಿ ಗ್ರಾಪಂನ ಒಟ್ಟು 11ಸದಸ್ಯರ ಪೈಕಿ ಎಂಟು ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.
ನೂತನ ಉಪಾಧ್ಯಕ್ಷರನ್ನು ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ, ಗ್ರಾಪಂ. ಅಧ್ಯಕ್ಷೆ ರೇಣುಕವ್ವ ತುಮರಿಕೊಪ್ಪ, ಮಾಜಿ ಉಪಾಧ್ಯಕ್ಷ ಮಾರುತಿ ಕಾಳಪ್ಪನವರ, ಸದಸ್ಯರುಗಳಾದ ಚನ್ನಪ್ಪ ಕಾಕೋಳ, ಲಕ್ಷ್ಮಣ ಹಾವೇರಿ, ನೀಲಮ್ಮ ಹರಿಜನ, ಚಂದ್ರಕಲಾ ತಳವಾರ, ಲಕ್ಷ್ಮವ್ವ ಲಿಂಗಾಪೂರ, ಕಾಂಗ್ರೆಸ್ ಮುಖಂಡರಾದ ಮಹೇಶಗೌಡ ಪಾಟೀಲ, ಸುಭಾಸ ಮಣ್ಣಪ್ಪನವರ, ಗಣೇಶಪ್ಪ ತುಮರಿಕೊಪ್ಪ, ನಾಗನಗೌಡ ಪಾಟೀಲ, ಅಶೋಕ ತಿಳವಳ್ಳಿ, ವೀರಭದ್ರಗೌಡ ಪಾಟೀಲ, ಪಿಡಿಓ ಗದಿಗೆಪ್ಪ ಕೊಪ್ಪದ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಅಭಿನಂದಿಸಿದರು.