ಉಪಾಧ್ಯಕ್ಷರಾಗಿ ಅರವಿಂದ ಕುಲಕರ್ಣಿ ಅವಿರೋಧ ಆಯ್ಕೆ

ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕೆ.ಶಾಂತಪ್ಪ

  • ರಾಯಚೂರು.ನ.13- ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಕೆ.ಶಾಂತಪ್ಪ ಮತ್ತು ಉಪಾಧ್ಯಕ್ಷರಾಗಿ ರಾಯಚೂರವಾಣಿ ವ್ಯವಸ್ಥಾಪಕ ಸಂಪಾದಕರಾದ ಅರವಿಂದ ಕುಲಕರ್ಣಿ ಅವರು ಗುರುವಾರ ಇಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.
    ಸಂಘದ ಅಧ್ಯಕ್ಷರಾಗಿದ್ದ ನರಸಣ್ಣ ಅವರ ರಾಜೀನಾಮೆಯಿಂದಾಗಿ ಈ ಸ್ಥಾನ ತೆರವಾಗಿತ್ತು. ನೂತನ ಅಧ್ಯಕ್ಷರ ಆಯ್ಕೆಯಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ ಕುಲಕರ್ಣಿ ಅವರನ್ನು ಒಮ್ಮತದಿಂದ ಆರಿಸಲಾಯಿತು.
    ಕರ್ನಾಟಕ ಸಂಘದಲ್ಲಿ ಗುರುವಾರ ಸಂಜೆ ಸಂಘದ ಆಡಳಿತ ಮಂಡಳಿ ಸಭೆ ಜರುಗಿತು. ಈವರೆಗೆ ಅಧ್ಯಕ್ಷರಾಗಿದ್ದ ನರಸಣ್ಣ ಅವರು ಸಂಘಕ್ಕೆ ಸಲ್ಲಿಸಿದ ಅವಿರತ ಸೇವೆಯನ್ನು ಸಕಲ ಸದಸ್ಯರು ಮುಕ್ತ ಕಂಠದಿಂದ ಪ್ರಶಂಸಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಗಟ್ಟು, ಕಾರ್ಯದರ್ಶಿ ಮುರಳೀಧರ ಕುಲಕರ್ಣಿ, ಆಡಳಿತ ಮಂಡಳಿ ಸದಸ್ಯರಾದ ಕೆ. ಗಿರಿಧರ, ಮಲ್ಲನಗೌಡ ಇಂದುಪುರ, ಡಾ.ಶೀಲಾದಾಸ್, ಕೆ.ಕರಿಯಪ್ಪ ಮಾಸ್ತರ್, ಪಲುಗುಲ ನಾಗರಾಜ್, ನಗರಸಭೆ ಸದಸ್ಯರಾದ ಈ ಶಶಿರಾಜ್, ವೀರಹನುಮಾನ್, ಬಾಬು ಭಂಡಾರಿಗಲ್, ಜಿ.ಹನುಮಂತಪ್ಪ ಅವರು ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
    ಮುರಳೀಧರ ಕುಲಕರ್ಣಿ ಲೆಕ್ಕ ಪತ್ರ ಮಂಡಿಸಿದರು. ಶ್ರೀನಿವಾಸ ಗಟ್ಟು ವಂದನೆ ಸಲ್ಲಿಸಿದರು. ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಶಾಂತಪ್ಪ. ಉಪಾಧ್ಯಕ್ಷ ಅರವಿಂದ ಕುಲಕರ್ಣಿ ಮತ್ತು ತಮ್ಮ ಇತ್ತೀಚಿನ ‘ಧಮ್ಮ ಪದ’ ಕೃತಿಗಾಗಿ ಗುಲಬರ್ಗಾ ವಿವಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಂಘದ ಸದಸ್ಯ ವೀರಹನುಮಾನ್ ಅವರನ್ನು ಸಭೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.