ಉಪವಿಭಾಗಾಧಿಕಾರಿಯಾಗಿ ಅಶೋಕ ತೇಲಿ ಅಧಿಕಾರ


ಧಾರವಾಡ, ಜ 14: ಧಾರವಾಡ ಉಪವಿಭಾಗಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಅಶೋಕ್ ತೇಲಿ ಅವರು ಡಾ.ಗೋಪಾಲಕೃಷ್ಣ .ಬಿ. ಅವರಿಂದ ಅಧಿಕಾರ ವಹಿಸಿಕೊಂಡರು.
ನೂತನ ಎಸಿ ಅಶೋಕ ತೇಲಿಯವರು ಮೂಲತಃ ವಿಜಯಪುರ ಜಿಲ್ಲೆಯ ಬಳ್ಳೊಳ್ಳಿ ಗ್ರಾಮದವರಾಗಿದ್ದಾರೆ. ಇವರು 2004 ರಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿಧರರಾಗಿದ್ದು, ಸುಮಾರು 8 ವರ್ಷಗಳ ಕಾಲ ಸಾಫ್ಟ್‍ವೇರ್ ಇಂಜಿನೀಯರ್ ಆಗಿ ಕೆಲಸ ಮಾಡಿದ್ದಾರೆ.
2014 ರ ಬ್ಯಾಚ್ ಎಸಿ ಆಗಿರುವ ಇವರು ಚಿಕ್ಕಬಳ್ಳಾಪುರದಲ್ಲಿ ಪೆÇ್ರಬೇ?Àನರಿ ಎಸಿ ಆಗಿ ಜಮಖಂಡಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಬೆಳಗಾವಿ ಉಪವಿಭಾಗಾಧಿಕಾರಿಯಾಗಿ, ಧಾರವಾಡದಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಮತ್ತು ಸವಣೂರ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿ ಇಂದು ಧಾರವಾಡ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.