ಉಪಯೋಗಕ್ಕೆ ಬಾರದ ಸಾರ್ವಜನಿಕ ಶೌಚಾಲಯ

ಬೂದೆಪ್ಪ ಖಾನಾಪೂರ
ಗಬ್ಬೂರು,ಜೂ.೦೭-
ಸರ್ಕಾರವು ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸ್ವಚ್ಛ ಭಾರತ ಯೋಜನೆಯಡಿ ಸರ್ಕಾರವು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಮಹಿಳೆಯರ ಸಾರ್ವಜನಿಕರ ಶೌಚಾಲಯಯೊಂದು ಏಳು ವರ್ಷಗಳಿಂದ ಉದ್ಘಾಟನೆಗೊಳ್ಳದೆ ಕಾಮಗಾರಿ ಮೂಲೆ ಸೇರಿದೆ.
ಜಿನ್ನಾಪುರ ಗ್ರಾಮದ ಸರ್ಕಾರಿ ಶಾಲೆಯ ಆವರಣದ ಹತ್ತಿರದಲ್ಲಿ ಸುಮಾರು ೧೦ ಲಕ್ಷ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಮಹಿಳೆಯರ ಶೌಚಾಲಯ ನಿರ್ಮಾಣಗೊಂಡಿದ್ದರೂ ಗ್ರಾಮದ ಸಾರ್ವಜನಿಕ ಮಹಿಳೆಯರಿಗೆ ಶೌಚಾಲಯದ ಸುತ್ತಲೂ ಕಟ್ಟಡದೆತ್ತರಕ್ಕೆ ಜಾಲಿ ಕಂಟಿ ಗಿಡಗಳು ಬೆಳೆದು ಶೌಚಾಲಯ ಕಾಣದಂತಾಗಿದೆ. ಇದರಿಂದ ಇಲ್ಲಿನ ಜನರ ಉಪಯೋಗಕ್ಕೆ ಬಾರದಂತಾಗಿದ್ದು ಸ್ಥಳೀಯ ನಿವಾಸಿಗಳು ಇಂದಿಗೂ ಬಯಲು ಶೌಚಾಲಯವೇ ಅನಿವಾರ್ಯವಾಗಿದೆ.
ಅಲ್ಲದೆ ಸಾರ್ವಜನಿಕ ಶೌಚಾಲಯ ನಿರ್ಮಿಸಿ ನೀರಿನ ವ್ಯವಸ್ಥೆಯೂ ಮಾಡಿಲ್ಲ. ಕೂಡಲೇ ಮಹಿಳೆಯರ ಸಾರ್ವಜನಿಕರ ಶೌಚಾಲಯ ಅರೆಬರೆ ಕಾಮಗಾರಿಯಾಗಿ ನಿರ್ಮಿಸಿದ್ದು ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಕೂಡಲೇ ಗುತ್ತೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಜಿನ್ನಾಪೂರ ಗ್ರಾಮದಲ್ಲಿ ಕೂಡಲೇ ಕಾಮಗಾರಿ ಗುಣಮಟ್ಟಗೊಳ್ಳಿಸಿ ಉದ್ಘಾಟನೆ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
೨೦೧೬-೧೭ನೇ ಸಾಲಿನ ಎಚ್.ಕೆ.ಆರ್.ಡಿ.ಬಿ ಯೋಜನೆಯಡಿ ೧೦ ಲಕ್ಷ ರೂಪಾಯಿ ವೆಚ್ಚದ ಶೌಚಾಲಯ ಆರು ವರ್ಷ ಕಳೆದರೂ ಇನ್ನು ಬಳಕೆಯಾಗದೆ ಬಿದ್ದಿದೆ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾ.ಪಂ ವ್ಯಾಪ್ತಿಯ ಜಿನ್ನಾಪುರ ಗ್ರಾಮದಲ್ಲಿ ಸಾರ್ವಜನಿಕ ಮಹಿಳೆಯರ ಶೌಚಾಲಯ ನಿರ್ಮಾಣ ಗೊಂಡಿದ್ದು ನಿರ್ಮಿತ ಕೇಂದ್ರದಿಂದ ಈ ಕಟ್ಟಡ ಕಾಮಗಾರಿ ಮಾಡಲಾಗಿದೆ.
ರಾಮದುರ್ಗ ಗ್ರಾ.ಪಂ ಪಿಡಿಒ ಹಾಗೂ ಜನಪ್ರತಿನಿಧಿಗಳ ನಿಸ್ಕಾಳಜಿಯಿಂದ ಈ ಕಾಮಗಾರಿ ಹಾಗೆ ನಿರ್ಬಳಕೆಯಾಗಿ ಉಳಿದಿದೆ ಎನ್ನುವ ಮಾತು ಗ್ರಾಮಸ್ಥರಿಂದ ಕೇಳಿ ಬರುತ್ತದೆ ಸಾರ್ವಜನಿಕ ಹಿತ ಕಾಪಾಡಬೇಕಾದ ಸರಕಾರ ಅಧಿಕಾರಿಗಳು ಹಾಗೂ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರ ನಿರ್ಲಕ್ಷ್ಯ ಧೋರಣೆಯಲ್ಲಿ ಈ ಶೌಚಾಲಯ ಬಳಕೆ ಆಗದೆ ಜನ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಗ್ರಹಿಸಿದರು.