ಕೋಲಾರ,ಮೇ ೩೧- ನಗರದಲ್ಲಿ ಸುಮಾರು ೩೫ ಶುದ್ದ ನೀರಿನ ಘಟಕಗಳು ಆಳವಡಿಸಿ ಸುಮಾರು ೩-೪ ವರ್ಷಗಳಾಗಿದೆ ಅದರೆ ಇವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಆಲಂಕಾರಿಕವಾಗಿದ್ದರೂ ಜನಪ್ರತಿನಿಧಿಗಳ ಇಚ್ಚಾ ಕೊರತೆಯಿಂದ ಕೇಳವವರೇ ಇಲ್ಲದಂತಾಗಿದೆ.
ಕೇಂದ್ರ ಸರ್ಕಾರವು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಮೃತ ಯೋಜನೆಯಲ್ಲಿ ಕೋಲಾರ ನಗರಕ್ಕೆ ವಾರ್ಡ್‌ಗೆ ಒಂದರಂತೆ ಸುಮಾರು ೩೫ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ ಸಹ ಕೇವಲ ೧೦-೧೨ ಶುದ್ದ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು ಉಳಿದ ಎಲ್ಲವೂ ಕೆಟ್ಟು ಹಾಳಾಗಿದೆ. ಈ ಸಂಬಂದವಾಗಿ ಸಾರ್ವಜನಿಕರು ನಗರಸಭೆಗೆ ಹಾಗೂ ನೀರು ಸರಬರಾಜು ಇಲಾಖೆಗೆ ದೂರಿದರೂ ಸಹ ಯಾವೂದೇ ಪ್ರಯೋಜನವಾಗಿಲ್ಲ.
ಜಿಲ್ಲಾಧಿಕಾರಿಗಳು ಈ ಸಂಬಂಧವಾಗಿ ೩-೪ ಸಭೆಗಳನ್ನು ಮಾಡಿದರೂ ಪ್ರಯೋಜವಿಲ್ಲದಂತಾಗಿದೆ. ಸಾರ್ವಜನಿಕರಿಗೆ ಶುದ್ದ ನೀರು ಪೂರೈಕೆ ಇಲ್ಲದೆ ಪ್ಲೋರೈಡ್ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ಅದರೆ ಸಂಬಂಧ ಪಟ್ಟ ಇಲಾಖೆಗಳು ಯಾವೂದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದೆ. ವಾರ್ಡ್‌ಗಳಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ಈ ಬಗ್ಗೆ ಕಾಳಜಿಯೇ ಇಲ್ಲದೆ ತಮ್ಮ ವ್ಯವಹಾರಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.
ನಗರಸಭೆ ಅಧಿಕಾರಿಗಳು ಈ ಕುರಿತು ಶುದ್ದ ನೀರಿನ ಘಟಕಗಳನ್ನು ನಿರ್ವಾಹಣೆ ಮಾಡುವುದು ನೀರು ಸರಬರಾಜು ಇಲಾಖೆಗೆ ಸಂಬಂಧಿಸಿದ್ದಾಗಿದೆ. ಶುದ್ದ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಿದರೆ ಮಾತ್ರ ನಾವು ಜವಾಬ್ದಾರಿ ತೆಗೆದು ಕೊಳ್ಳುತ್ತೇವೆ ಅದರೆ ಸುಮಾರು ೨೦ಕ್ಕೂ ಹೆಚ್ಚು ಶುದ್ದ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇವುಗಳನ್ನು ನಾವು ಪಡೆದು ಪ್ರಯೋಜನ ಇಲ್ಲದಂತಾಗಿದೆ ಎನ್ನುತ್ತಾರೆ.
ಆರ್.ಓ. ಪ್ಲಾಂಟ್‌ಗಳ ಟೆಂಡರ್‌ಗಳನ್ನು ಪಡೆದಿರುವ ಏಜೆನ್ಸಿಗಳು ೭ ವರ್ಷ ಇದನ್ನು ಸಮರ್ಪಕವಾಗಿ ನಿರ್ವಾಹಣೆ ಮಾಡಬೇಕೆಂದು ಕರಾರು ಇದ್ದರೂ ಸಹ ಕಳೆದ ೩ ವರ್ಷಗಳಿಂದ ಆರ್.ಓ. ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಕೇವಲ ಅಲಂಕರಿಕಾ ಗೊಂಬೆಗಳಂತೆ ಪ್ರತಿ ವಾರ್ಡಿನಲ್ಲಿ ಸ್ಥಾಪಿಸಲಾಗಿದೆ. ನಗರದ ಕಠಾರಿಪಾಳ್ಯ, ಅರಳೇ ಪೇಟೆ, ಗೌರಿಪೇಟೆ, ಪಿ.ಸಿ. ಬಡಾವಣೆ, ಹಳೆ ಬಡಾವಣೆ, ಅಮ್ಮವಾರಿ ಪೇಟೆ, ಸೇರಿದಂತೆ ಬಹುತೇಕ ವಾರ್ಡಿಗಳಲ್ಲಿ ಆರ್.ಓ. ಪ್ಲಾಂಟ್‌ಗಳು ಸಾರ್ವಜನಿಕರಿಗೆ ಉಪಯೋಗವಿಲ್ಲದೆ ಇಲಾಖೆ ಅಧಿಕಾರಿಗಳು ಸರ್ಕಾರಿ ಹಣವನ್ನು ಲೊಟಿ ಮಾಡುವ ಯೋಜನೆಗಳಾಗಿದೆ ಎಂದು ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
ಈ ಸಂಬಂಧವಾಗಿ ನೀರು ಸರಬರಾಜು ಮಂಡಳಿಯವರು ನಗರಸಭೆಯವರು ಹಣ ಪಾವತಿಸ ಬೇಕು. ಅವರು ಹಣ ಪಾವತಿಸುತ್ತಿಲ್ಲ, ಶುದ್ದ ನೀರಿನ ಘಟಕಗಳನ್ನು ಹಸ್ತಾಂತರ ಮಾಡಲು ಹೋದರೆ ಸ್ವೀಕರಿಸುತ್ತಿಲ್ಲ. ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ದೂರುತ್ತಾರೆ.