ಧಾರವಾಡ,ಜು17 : ಪ್ರಬಂಧ ಸಾಹಿತ್ಯಕ್ಕೆರಾ. ಯ.ಧಾರವಾಡಕರಅವರಕೊಡುಗೆಅಪಾರವಾದದ್ದು. ಅವರ ಸಂಶೋಧನಾ ಪ್ರಬಂಧ ಹೊಸಗನ್ನಡ ಸಾಹಿತ್ಯದಉದಯಕಾಲ ಎಂದು ಹಿರಿಯರಂಗಕರ್ಮಿಡಾ.ಶಶಿಧರ ನರೇಂದ್ರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ರಾ. ಯ.ಧಾರವಾಡಕರದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕಾರ್ಯಕ್ರಮದಲ್ಲಿ `ಡಾ. ರಾ. ಯ.ಧಾರವಾಡಕರ ಬದುಕು-ಬರಹ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಧಾರವಾಡಕರಅವರು 1860 ನಂತರದ ಸಾಹಿತ್ಯಚರಿತ್ರೆಯಇತಿಹಾಸವನ್ನು ನಿಖರವಾಗಿ ಗುರುತಿಸಿದ್ದಾರೆ. ಜೊತೆಗೆ ಅನೇಕ ಸಾಹಿತಿಗಳ ಕೃತಿಗಳನ್ನು ಪರಿಚಯಿಸಿದ್ದಾರೆ. ಕನ್ನಡ ನಾಡು, ನುಡಿಗೆ, ಭಾಷಾ ಬೆಳವಣಿಗೆಗೆ ಅನೇಕ ಸಂಘ, ಸಂಸ್ಥೆಗಳು ಶ್ರಮಿಸಿದ್ದು ಅದರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರಯಾವರೀತಿಯದುಎಂಬುದರ ಬಗ್ಗೆ ಬಹಳ ಸ್ಪಷ್ಟವಾಗಿ ಈ ಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾರೆ.
ಅಂದಿನ ಜನಕನ್ನಡ ನಾಡು, ನುಡಿಗಾಗಿ ಬದ್ಧತೆ ಹಾಗೂ ನಿಸ್ವಾರ್ಥ ಮನೋಭಾವನೆಯಿಂದ ಶ್ರಮಿಸಿದ್ದನ್ನು ಈ ಕೃತಿಯಲ್ಲಿ ಸ್ಮರಿಸಿದ್ದಾರೆ.ಅವರ ಬರವಣಿಗೆ ವಿಶಾಲವಾದ ಬುದ್ದಿಮತ್ತೆಯಿಂದಕೂಡಿದ್ದು, ಹಾಸ್ಯಮಯವಾದ ಭಾಷೆಯ ಬಳಕೆ, ಸಹೃದಯರ ಮನವನ್ನುಗೆಲ್ಲುವಲ್ಲಿ ಯಶಸ್ವಿಯಾದದ್ದನ್ನು ಕಾಣುತ್ತೇವೆ. ಅಮೇರಿಕನ ನಿಗ್ರೋ ಕಥೆಗಳು ಎಂಬ ಕೃತಿಯಲ್ಲಿ ನಿಗ್ರೋಜನಾಂಗದ ಸಂಸ್ಕøತಿಯನ್ನುಕಟ್ಟಿಕೊಟ್ಟಿದ್ದಾರೆ.ಅವರ ದೂಮ್ರವಲಯಗಳು, ನಾ ಕಂಡಅಮೇರಿಕಾ ಪ್ರವಾಸಕಥನ ಮುಂತಾದವುಗಳು ಸಹೃದಯರ ಮೆಚ್ಚುಗೆ ಗಳಿಸಿದ ಕೃತಿಗಳಾಗಿವೆ ಡಾ.ಶಶಿಧರ ನರೇಂದ್ರ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ.ಅಜಿತಪ್ರಸಾದ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘವು ಒಂದು ಪುಣ್ಯಸ್ಥಳವಾಗಿದೆ.ಇದರ ಮುಖಾಂತರವಾಗಿ ಅನೇಕ ಜನ ನಿಸ್ಪøಹ ಮನೋಭಾವದಿಂದಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಾ ಬಂದಿದ್ದನ್ನುಕಾಣುತ್ತೇವೆ. ರಾ.ಯ.ಧಾರವಾಡಕರಅವರುಗಂಭೀರ ಸ್ವಭಾವದವರಾಗಿದ್ದರು. ಅವರನ್ನು ನೋಡಿದಕೂಡಲೇಗೌರವದ ಭಾವನೆ ಮೂಡುತ್ತಿತ್ತು.ಶಿಸ್ತುಬದ್ಧತೆಗೆ ಪ್ರಾಧಾನ್ಯತೆಕೊಡುತ್ತಿದ್ದರು.ಉತ್ತಮ ಆಡಳಿತಗಾರರಾಗಿದ್ದರು.ಪ್ರಭಾವಶಾಲಿ ಪ್ರಾಧ್ಯಾಪಕರಾಗಿದ್ದರು.ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು ಇವರತರಗತಿಗೆ ಬಂದುಕೂಡುತ್ತಿದ್ದರು. ಸರಕಾರ ಹಾಗೂ ವಿಶ್ವವಿದ್ಯಾಲಯದ ಮಟ್ಟದಲ್ಲಿಇವರ ಮಾತುಗಳಿಗೆ ಗೌರವ ಹಾಗೂ ಮನ್ನಣೆಇರುತ್ತಿತ್ತು. ಇವರಕನ್ನಡ ಭಾಷಾಶಾಸ್ತ್ರಕೃತಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆÉ ಪಠ್ಯಪುಸ್ತಕವಾದದ್ದನ್ನು ಗಮನಿಸಿದರೆ ಅವರ ಬರವಣಿಗೆಯ ಮೌಲ್ಯದಅರಿವಾಗುತ್ತದೆ.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅವರು, ಶ್ರೇಷ್ಠ ಉಪನ್ಯಾಸಕರಾಗಿದ್ದರಾ.ಯ.ಧಾರವಾಡಕರಅವರುಧಾರವಾಡದ ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕಕ್ಷೇತ್ರಕ್ಕೆ ನೀಡಿದಕೊಡುಗೆಅಪಾರವಾಗಿದೆ.ಅವರೊಬ್ಬ ವಿದ್ವಾಂಸರಾಗಿದ್ದರುಎಂದರು.
ವೇದಿಕೆ ಮೇಲೆ ಶಂಕರ ಕುಂಬಿ ಉಪಸ್ಥಿತರಿದ್ದರು.ಶಂಕರ ಹಲಗತ್ತಿ ಸ್ವಾಗತಿಸಿದರು.ಡಾಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠಕಾರ್ಯಕ್ರಮ ನಿರೂಪಿಸಿದರು.ಶಿವಾನಂದ ಭಾವಿಕಟ್ಟಿ ವಂದಿಸಿದರು.
ಸಮಾರಂಭದಲ್ಲಿ ಬಸವಪ್ರಭು ಹೊಸಕೇರಿ, ಡಾ.ಧನವಂತ ಹಾಜವಗೋಳ, ಹರ್ಷ ಡಂಬಳ, ಎಸ್.ಬಿ. ಗುತ್ತಲ, ಗೌಡರ, ಮಹಾವೀರಉಪಾಧ್ಯೆ, ಜಿನೇಂದ್ರ ಕುಂದಗೋಳ, ನವೀನಶಾಸ್ತ್ರಿ ಪುರಾಣಿಕ, ಡಾ.ಸುರೇಶ ಹೊರಕೇರಿ, ಪ್ರಕಾಶ ಮುಳಗುಂದ ಮುಂತಾದವರು ಉಪಸ್ಥಿತರಿದ್ದರು.