ಧಾರವಾಡ,ಜು.15: ಒಕ್ಕೂಟ ವ್ಯವಸ್ಥೆಗೆಧಕ್ಕೆತರುವಂತಹ ಕಾನೂನುಗಳು ಜಾರಿಗೆತರುವಕೇಂದ್ರದ ಪ್ರಯತ್ನದ ಇಂದಿನ ರಾಜಕೀಯಧೋರಣೆ ನಿರಂಕುಶ ಪ್ರಭುತ್ವವನ್ನು ಪ್ರತಿಪಾದಿಸಿ ರಾಜ್ಯ ಸರಕಾರಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದೆ ಎಂದು ನ್ಯಾಯವಾದಿ ಪಿ.ಎಚ್. ನೀರಲಕೇರಿಖಾರವಾಗಿ ನುಡಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ರಾಚಪ್ಪ ಹಡಪದದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಒಕ್ಕೂಟ ವ್ಯವಸ್ಥೆಯಲ್ಲಿರಾಜಕೀಯ ಪರಿಸ್ಥಿತಿ : ಅಂದು-ಇಂದು’ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲಿ ಹೋರಾಟ ಮಾಡಿದ ಶಾಂತವೀರಗೋಪಾಲಗೌಡ, ಜಯಪ್ರಕಾಶ ನಾರಾಯಣ, ಚಂದ್ರಶೇಖರ, ಮೊರಾರ್ಜಿದೇಸಾಯಿಅಂಥ ಹಿರಿಯರನ್ನು ಸ್ಮರಿಸಬೇಕು. ಭಾರತದಒಕ್ಕೂಟ ವ್ಯವಸ್ಥೆಯಲ್ಲಿ ತುರ್ತುಪರಿಸ್ಥಿತಿ ಎದುರಿಸುವ ಸಂದರ್ಭದಲ್ಲಿ ಈ ಭಾಗದದೊಡ್ಡ ಹೋರಾಟಗಾರರಾಗಿ ದಿ. ರಾಚಪ್ಪ ಹಡಪದಅವರು ಸೇವೆ ಸಲ್ಲಿಸಿರುವುದು ಸ್ತುತ್ಯಾರ್ಹ. ಒಂದುದೇಶ, ಒಂದು ಭಾಷೆ, ಒಂದುಖಾತೆ, ಒಂದೇ ಭಾರತಎಂದುಕೇಂದ್ರ ಸರಕಾರದ ಸರ್ವಾಧಿಕಾರಿ ನಿಲುವು ದೇಶಕ್ಕೆ ಮಾರಕವಾಗಿದೆ.ಒಕ್ಕೂಟ ವ್ಯವಸ್ಥೆಯಲ್ಲಿ ಸಂಸ್ಕøತಿ, ನೆಲೆ ಪದ್ಧತಿ ಮೊಟಕುಗೊಳಿಸುವ ದುರುದ್ದೇಶ ನÀಡೆಸಿದೆ ಎಂದುಕೇಂದ್ರ ಸರಕಾರದ ನಡೆಯ ಬಗ್ಗೆ ವಿಶ್ಲೇಷಿಸಿ ಅಸಮದಾನವನ್ನು ಹೊರಹಾಕಿದರು.
ಇದೇ ಸಂದರ್ಭದಲ್ಲಿ ಪತ್ರಿಕಾಕ್ಷೇತ್ರದಲ್ಲಿ ಸೇವೆಗೈದ ಮನೋಜಕುಮಾರ ಪಾಟೀಲ ಅವರನ್ನುದತ್ತಿ ದಾನಿಗಳು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಮನೋಜ ಪಾಟೀಲ, ರಾಚಪ್ಪ ಹಡಪದ ಸಮಾಜವಾದಿ ಹೋರಾಟಗಾರರ ಸಂಪರ್ಕದಕೊಂಡಿಯಾಗಿಕಾರ್ಯಮಾಡಿ ಹೋರಾಟಕ್ಕೆ ಶಕ್ತಿ ತಂದುಕೊಟ್ಟರು.ತುರ್ತುಪರಿಸ್ಥಿತಿಯಲ್ಲಿ ಜೈಲು ಅನುಭವಿಸಿದರು. ಎಂದೂತಾನು ನಂಬಿದ ಸಿದ್ಧಾಂತವನ್ನು ಬಿಡದೇಜೀವನ ಸಾಗಿಸಿ ಸಮಾಜಕ್ಕೆ ಮಾದರಿಯಾಗಿ ಬದುಕಿ ಹೋದರುಎಂದುಅವರನ್ನು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿದ ಚಂದ್ರಕಾಂತ ಬೆಲ್ಲದ ಮಾತನಾಡಿ, ರಾಚಪ್ಪ ಹಡಪದ ನಡೆ ನುಡಿಯಲ್ಲಿಯಾವಕಪಟಇರುತ್ತಿದ್ದಿಲ್ಲ, ಪಾರದರ್ಶಕವಾಗಿ, ಸಮಾಜವಾದಿ ಚಿಂತನೆ ನಡುವಳಿಕೆಯಿಂದಿದ್ದ ರಾಚಪ್ಪ ಹಡಪದಅವರ ವ್ಯಕ್ತಿತ್ವದಗುಣಗಾನ ಮಾಡಿದರು. ಅವರಜತೆಗಿನಒಡನಾಟ, ಸಂಪರ್ಕಕುರಿತಂತೆ ಸ್ಮರಿಸಿಕೊಂಡರು.
ವೇದಿಕೆ ಮೇಲೆ ದತ್ತಿದಾನಿ ರವಿರಾಜ ಹಡಪದ ಉಪಸ್ಥಿತರಿದ್ದರು.ಮಧುಮತಿ ಸಣಕಲ್ ಪ್ರಾರ್ಥಿಸಿದರು.ಶಂಕರ ಕುಂಬಿ ಸ್ವಾಗತಿಸಿದರು.ವೀರಣ್ಣಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು.ಗುರು ಹಿರೇಮಠಕಾರ್ಯಕ್ರಮ ನಿರೂಪಿಸಿದರು.ಶಿವಾನಂದ ಭಾವಿಕಟ್ಟಿ ವಂದಿಸಿದರು.
ಸಮಾರಂಭದಲ್ಲಿ ಹರ್ಷ ಡಂಬಳ, ಮಹಾಂತೇಶಅಂಗಡಿ, ಸಿದ್ದಣ್ಣ ಕಮ್ಮಾರ, ಯಕ್ಕೇರಪ್ಪ ನಡುವಿನಮನಿ, ಆರ್.ಎಸ್. ಪಾಟೀಲ, ಎಂ.ಬಿ.ಕಟ್ಟಿ ಶ್ರೀಶೈಲಗೌಡ ಕಮತರ, ಹಡಪದ ಪರಿವಾರದವರು ಉಪಸ್ಥಿತರಿದ್ದರು.