ಉಪನ್ಯಾಸ ಕಾರ್ಯಕ್ರಮ

ಧಾರವಾಡ,ಮಾ21 : ವೈದ್ಯಕೀಯ ಶಿಕ್ಷಣ ಇರುವುದು ಇಂಗ್ಲೀಷನಲ್ಲಿ. ಔಷದೋಪಚಾರ ಮಾಡುವುದು ಕನ್ನಡದಲ್ಲಿ. ರೋಗಿ ಮತ್ತು ವೈದ್ಯರ ನಡುವೆ ಸರಿಯಾದ ಸಂವಹನ ಪ್ರಕ್ರಿಯೆ ಆಗದೆ ಇರುವುದರಿಂದ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತವೆ. ಸೂಕ್ತ ಸಮಯದ ಒಳ್ಳೆಯ ಮಾತುಗಳು ರೋಗಿ ಮತ್ತು ವೈದ್ಯರ ನಡುವಿನ ಸಮರವನ್ನು ನಿಷ್ಕ್ರೀಯಗೊಳಿಸುತ್ತವೆ ಎಂದು ಹುಬ್ಬಳ್ಳಿಯ ಅರಿವಳಿಕೆ ತಜ್ಞ ಡಾ. ಗೋವಿಂದ ಹೆಗಡೆ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಸಂಘದ ಸಂಸ್ಥಾಪಕರು ಹಾಗೂ ಸಂಸ್ಥಾಪನಾ ಕಾರ್ಯದರ್ಶಿ ಶ್ರೀ ರಾ.ಹ. ದೇಶಪಾಂಡೆ ಅವರ 163ನೇ ಜನ್ಮದಿನದ ಸ್ಮರಣೆ ನಿಮಿತ್ತ ಆಯೋಜಿಸಿದ್ದ `ವೈದ್ಯಕೀಯ ವೃತ್ತಿ-ಕನ್ನಡ ಭಾಷೆ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಬಂದ ವೈದ್ಯಕನ್ನಡ ಶಬ್ದಗಳನ್ನು ಎಷ್ಟರಮಟ್ಟಿಗೆ ಬಳಸಬಲ್ಲ?. ಅಷ್ಟೇ ಅಲ್ಲಕನ್ನಡ ಮನೆಯಲ್ಲಿಯೇಕನ್ನಡಕಲಿತು ವೈದ್ಯರಾದ ನಂತರಕನ್ನಡ ಸಂವಹನವನ್ನೇ ಮರೆತಿದ್ದಾರೆ. ಹೀಗಾಗಿ ರೋಗಿ ಮತ್ತು ವೈದ್ಯರ ನಡುವೆಕಂದಕಏರ್ಪಟ್ಟಿದೆ.ಇದು ಹೋಗಬೇಕಾದರೆಕನ್ನಡದಆಡು ಭಾಷೆಯಲ್ಲಿರೋಗಿಯೊಂದಿಗೆ ಸಂವಹನ ನಡೆಯಬೇಕು. ಹಲವಾರು ವೈದ್ಯಕೀಯ ಪದಗಳಿಗೆ ಕನ್ನಡದಅರ್ಥ ಹುಡುಕದೇಇಂಗ್ಲೀಷ ಪದವನ್ನೇಕನ್ನಡ ಭಾಷೆಯಾಗಿ ಸ್ವೀಕರಿಸಬೇಕು. ಉದಾಹರಣೆಯಾಗಿಅಲರ್ಜಿಎನ್ನುವ ಪದಕ್ಕೆ ಬೇರೆ ಬೇರೆ ಭಾಷೆಯಲ್ಲಿ ಶಬ್ದಗಳಿದ್ದಾಗಲೂ ಅದನ್ನುಅಲರ್ಜಿಅಂತಲೇ ಬಳಸಬೇಕು ವಿನಃ ಬೇರೆ ಭಾಷೆಯಿಂದ ಬಳಸಿದರೆ ರೋಗಿಗೆಅರ್ಥವಾಗಲಾರದು. ಬೇರೆ ಬೇರೆ ಚಟುವಟಿಕೆಗಳ ಮೂಲಕ ಕನ್ನಡ ಭಾಷೆಯನ್ನು ಬಳಸಿ ವೈದ್ಯರು ಮತ್ತು ರೋಗಿಗಳಲ್ಲಿ ಕನ್ನಡ ಭಾಷೆಯಅರಿವನ್ನು ಮೂಡಿಸುವುದುಅಗತ್ಯವಾಗಿದೆ.ಕನ್ನಡದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿಗಳನ್ನು ನೀಡುವುದರಿಂದ ಸಮುದಾಯದಆರೋಗ್ಯ ವರ್ಧನೆಯಾಗುತ್ತದೆ.ಕೆಲವೊಂದುಇಂಗ್ಲೀಷಿನ ವೈದ್ಯಕೀಯ ಶಬ್ದಗಳನ್ನು ಇಂಗ್ಲೀಷನಲ್ಲಿಯೇ ಬಳಸಬೇಕಾದ ಅಗತ್ಯವಿದೆ.ಅದನ್ನುಕನ್ನಡಿಕರಿಸುವುದರಿಂದಅರ್ಥವಾಗಲಾರದ ಸಂದರ್ಭ, ಸನ್ನಿವೇಶ ನಿರ್ಮಾಣವಾಗುತ್ತವೆಎಂದರು.
ಹೆರಿಗೆ ಮತ್ತು ಸ್ತ್ರೀ ಆರೋಗ್ಯತಜ್ಞಡಾ. ಸಂಜೀವಕುಲಕರ್ಣಿಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವೈದ್ಯರುಆಡುವ ವಿವೇಕದ ನುಡಿಗಳು ರೋಗಿಯ ಮೇಲೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು.ಅಲ್ಲದೆಇಂದು ನಡೆಯುತ್ತಿರುವ ವೈದ್ಯರ, ಆಸ್ಪತ್ರೆಗಳ ಮೇಲಿನ ಹಲ್ಲೆಗಳನ್ನು ಹಲ್ಲೆಯಾಗುವುದನ್ನುತಪ್ಪಿಸಬಹುದು. ಭಾಷಾ ಸಂಪತ್ತು, ಭಾಷೆಯ ಕೌಶಲ ವೈದ್ಯರಿಗೆಇರಬೇಕಾದದ್ದುತುಂಬಾಅಗತ್ಯವಾಗಿದೆ.ಇಂದು ವಿಜ್ಞಾನ, ತಂತ್ರಜ್ಞಾನಒಂದುಕಡೆ ಬೆಳೆಯುತ್ತ ಹೊರಟಿದೆ.ಇನ್ನೊಂದುಕಡೆಕನ್ನಡ ಕುಸಿಯುತ್ತ ಸಾಗಿದೆ.ವೈದ್ಯಕೀಯ ವೃತ್ತಿ ಹಾಗೂ ಕಾನೂನು ವೃತ್ತಿಗಳಲ್ಲಿ ಕನ್ನಡ ಬಳಕೆ ಅಧಿಕವಾಗಿಎರಡೂ ಕ್ಷೇತ್ರಗಳ ಜನಸಾಮಾನ್ಯರಿಗೆಅರ್ಥವಾಗುವಂತಿರಬೇಕು.ಎಂದಿಗಿಂತಇಂದುಕನ್ನಡವನ್ನು ಉಳಿಸಿ-ಬೆಳೆಸುವ ಕಾರ್ಯ ನಡೆಯಬೇಕಾಗಿದೆ.ಇಂದು ವೈದ್ಯಕೀಯ ವೃತ್ತಿಕಲಿಯುತ್ತಿರುವ ವಿದ್ಯಾರ್ಥಿಗಳಿಗೆ, ಯುವ ವೈದ್ಯರಿಗೆಕನ್ನಡದಲ್ಲಿಕಾವ್ಯ, ಕಥೆ, ಬರವಣಿಗೆ ಸ್ಪರ್ಧೆ, ಚರ್ಚೆಗಳನ್ನು ಇಟ್ಟುಕೊಳ್ಳುವುದರ ಮೂಲಕ ಅವರಲ್ಲಿಕನ್ನಡ ಭಾಷೆಯ ಬಳಕೆ ಹೆಚ್ಚು ಮಾಡುವಂತೆ ಮಾಡಬೇಕು.ಈ ನಿಟ್ಟಿನಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘ ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನುರೂಪಿಸುವುದುಎಂದು ಹೇಳಿದರು.
ವೇದಿಕೆ ಮೇಲೆ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಕುಂಬಿ ನಿರೂಪಿಸಿದರು.ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶತುರಮರಿ, ಶಿವಾನಂದ ಭಾವಿಕಟ್ಟಿ, ಎಂ.ಎಂ.ಚಿಕ್ಕಮಠ, ಡಾ.ಶಿವಾನಂದ ಟವಳಿ, ಅರುಣಎಸ್. ನಾಡಗೀರ, ಉದಯಚಂದ್ರ ದಿಂಡಿವಾರ, ಸುರೇಶ ಹಿರೇಮಠ, ಜಗದೀಶ ಮೇಳಿ, ಭೀಮಶಿ ಕಟಾವಿ, ವಿಜಯಲಕ್ಷ್ಮಿ ಕೊಟಗುಣಸಿ, ಮಾರ್ಕಂಡೇಯದೊಡಮನಿ, ಕೆ.ಎಂ.ಅಂಗಡಿ, ಸರೋಜಿನಿ ದೇವಮಾನೆ, ಪ್ರತಿಭಾಕುಲಕರ್ಣಿ ಸೇರಿದಂತೆ ಮುಂತಾದವರಿದ್ದರು.