ಉಪನ್ಯಾಸ ಕಾರ್ಯಕ್ರಮ

ಧಾರವಾಡ,ಫೆ26 : ಪ್ರಾರಂಭದಿಂದಲೂ ಇಂದಿನವರೆಗೂ ಮಹಿಳೆಯ ಅಭಿವೃದ್ದಿಯಾಗಿದೆಯೇ? ಅವಳು ಆರ್ಥಿಕವಾಗಿ ಬಲಿಷ್ಠಳಾಗಿದ್ದಾಳೆಯೇ?ಎಂಬ ಪ್ರಶ್ನೆ ಕಾಡುವುದು ಸಹಜ. ಭಾರತ ಆರ್ಥಿಕ ವ್ಯವಸ್ಥೆಗೆ ಶೇ 18 ರಷ್ಟು ಕೊಡುಗೆ ಮಹಿಳೆಯರಿಂದ ಸಂದಾಯವಾಗುತ್ತದೆ. ಸಂಘಟನಾತ್ಮಕವಾಗಿ ಶೇ 24 ರಷ್ಟು ಮಹಿಳೆಯರು ಉದ್ಯೋಗಸ್ಥರಾಗಿದ್ದಾರೆಎಂದುಧಾರವಾಡ ಕ.ವಿ.ವಿಯಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಡಾ.ಮನೋಜ ಡೊಳ್ಳಿ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಶ್ರೀಮತಿ ಸರಸ್ವತಿ ನಾಗಪ್ಪ ನಾಗಜ್ಜನವರದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕಾರ್ಯಕ್ರಮದಲ್ಲಿ `ಆರ್ಥಿಕತೆಯಲ್ಲಿ ಮಹಿಳೆಯ ಪಾತ್ರ’ ಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಲಿಂಗ ತಾರತಮ್ಯದಲ್ಲಿ 147 ದೇಶಗಳಲ್ಲಿ 127 ನೇ ಸ್ಥಾನ ಭಾರತಕ್ಕಿದೆ.ಇಂತಹ ಸನ್ನಿವೇಶದಲ್ಲಿದೇಶಉದ್ಧಾರವಾಗಲು ಸಾಧ್ಯವೇ?.ಮಹಿಳೆಯರ ಅಭಿವೃದ್ಧಿಯಾದಾಗ ಮನೆ, ದೇಶಅಭಿವೃದ್ಧಿಯಾಗಲು ಸಾಧ್ಯ.ಶೇ 91 ರಷ್ಟು ವೇತನರಹಿತ ಮನೆಕೆಲಸಗಳನ್ನು ಮಹಿಳೆ ಮಾಡುತ್ತಿದ್ದಾಳೆ.ಸಾಂಸ್ಕøತಿಕವಾಗಿ ಮುಂದುವರೆಯಬೇಕಾದರೂ ಮಹಿಳೆಯ ಪಾತ್ರ ಮುಖ್ಯವಾಗಿದೆ.ಎಷ್ಟೋ ಸಂದರ್ಭಗಳಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮಹಿಳೆಯ ಅಧಿಕಾರವನ್ನು ಪುರಷರೇ ನಿಭಾಯಿಸುತ್ತಿರುವುದುದುರಂತದ ಸಂಗತಿಯಾಗಿದೆ. ಪ್ರತಿಯೊಂದು ಹಂತದಲ್ಲೂ ಮಹಿಳೆ ಮುಂದೆಇದ್ದಾಗಲೂಕೂಡಅವರಿಗೆಕೊಡಬೇಕಾದ ಸ್ವಾತಂತ್ರ್ಯವನ್ನುಕೊಡದೇಇರುವುದರಿಂದ ಅವಳಲ್ಲಿ ಹುದುಗಿರುವ ಪ್ರತಿಭೆಕಮರಿಹೋಗುತ್ತಿರುವುದುಕಾಣುತ್ತೇವೆ.
ಹುಬ್ಬಳ್ಳಿ-ಧಾರವಾಡ ವಾರ್ಡ ಸಮಿತಿ ಬಳಗದ ಸಂಚಾಲಕ ಲಿಂಗರಾಜಧಾರವಾಡಶೆಟ್ಟರಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಆರ್ಥಿಕತೆಎಂದಕೂಡಲೇ ಶರಣರು ಸಾರಿದಕಾಯಕತತ್ವಕಣ್ಣ ಮುಂದೆ ಬಂದು ನಿಲ್ಲುತ್ತದೆ. ದುಡಿತದಿಂದದುಡ್ಡು ಬರುತ್ತದೆ. ದುಡ್ಡಿನಿಂದ ಪ್ರಸಾದ ಸಿಗುತ್ತದೆ. ದುಡಿತದಲ್ಲಿ ಪ್ರಾಮಾಣಿಕತೆಇರಬೇಕು. ಹೆಣ್ಣುಮಕ್ಕಳ ಉಳಿತಾಯ ಮನೆಯಲ್ಲಿರುವ ಸಣ್ಣಪುಟ್ಟ ಡಬ್ಬಿಗಳಿಂದಲೇ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿಗುಣಕ್ಕೆ ಬೆಲೆಯಿತ್ತು.ಇವತ್ತು ಹಣದ ಪ್ರಾಬಲ್ಯದಿಂದಅದರ್ಶ ಮೌಲ್ಯಗಳು ಬೆಲೆಯನ್ನು ಕಳೆದುಕೊಳ್ಳುತ್ತಿರುವುದು ಖೇದದ ಸಂಗತಿಯಾಗಿದೆ.ಸಮಾನ ಕೆಲಸಕ್ಕೆ ಸಮಾನ ಫಲ ಸಿಗಬೇಕಾದದ್ದು ಇಂದಿನ ಅಗತ್ಯವಾಗಿದೆಎಂದರು.
ದತ್ತಿದಾನಿಗಳಾದ ಅರವಿಂದ ನಾಗಜ್ಜನವರದತ್ತಿಆಶಯಕುರಿತು ಮಾತನಾಡಿದರು.
ಸತೀಶತುರಮರಿ ಸ್ವಾಗತಿಸಿದರು.ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಚನ್ನಶೆಟ್ಟಿ, ವಿಜಯಕುಮಾರಅಣ್ಣಿಗೇರಿ, ಸಂತೋಜ, ಪಾರ್ವತಿ ಹಾಲಭಾವಿ, ಸೀತಾ ಛಪ್ಪರ ಸೇರಿದಂತೆ ನಾಗಜ್ಜನವರ ಪರಿವಾರದವರು ಉಪಸ್ಥಿತರಿದ್ದರು.