ಉಪನ್ಯಾಸ ಕಾರ್ಯಕ್ರಮ

ಧಾರವಾಡ,ಫೆ23: ಆಂಧ್ರಪ್ರದೇಶದಕರ್ನೂಲ ಜಿಲ್ಲೆಯ ಪೆದ್ದಪಾಡುಗ್ರಾಮದಲ್ಲಿ ಜನಿಸಿದ ದಾಮೋದರಂ ಸಂಜೀವಯ್ಯನವರು ಕಾನೂನು ಬಿ.ಎಲ್. ಪದವಿ ಹೊಂದಿದವರು. 1950 ರಲ್ಲಿತಾತ್ಕಾಲಿಕ ಸಂಸತ್ತಿನ ಸದಸ್ಯರಾಗುವ ಮೂಲಕ ರಾಜಕೀಯಜೀವನ ಪ್ರಾರಂಭಿಸಿದವರು.1952 ರಲ್ಲಿರಾಜಾಜಿಯವರ ಮಂತ್ರಿಮಂಡಳದಲ್ಲಿ ಸಚಿವರಾಗಿ, ಟಿ ಪ್ರಕಾಶಂ ಬಿ.ಗೋಪಾಲರೆಡ್ಡಿ, ಸಂಜೀವರೆಡ್ಡಿ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದವರು. 1960ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಮೂಲಕ ಸ್ವತಂತ್ರ ಭಾರತದಚರಿತ್ರೆಯಲ್ಲಿ ಮೊಟ್ಟಮೊದಲ ದಲಿತ ಮುಖ್ಯಮಂತ್ರಿಯಾಗಿಇತಿಹಾಸ ಸೃಷ್ಟಿಸಿದರು ಎಂದುಧಾರವಾಡಕರ್ನಾಟಕ ಕಲಾ ಮಹಾವಿದ್ಯಾಲಯರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಡಾ. ಸುರೇಶ ನರಸಪ್ಪ ಹುಲ್ಲನ್ನವರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿರಾಷ್ಟ್ರನಾಯಕದಾಮೋದರಂ ಸಂಜೀವಯ್ಯನವರ ಸ್ಮರಣಾರ್ಥ ಆಯೋಜಿಸಿದ್ದ ‘ದತ್ತಿಉದ್ಘಾಟನೆ ಮತ್ತುಉಪನ್ಯಾಸ’ ಕಾರ್ಯಕ್ರಮದಲ್ಲಿ’ದಾಮೋದರಂ ಸಂಜೀವಯ್ಯನವರಜೀವನ ಮತ್ತು ಸಂದೇಶ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ನೆಹರು ಮಂತ್ರಿಮಂಡಲದಲ್ಲಿಕಾರ್ಮಿಕ ಮತ್ತುಉದ್ಯೋಗಖಾತೆಯ ಮಂತ್ರಿಯಾಗಿ,, ಲಾಲ್ ಬಹದ್ದೂರ್ ಶಾಸ್ತ್ರೀಯವರ ಮಂತ್ರಿ ಮಂಡಲದಲ್ಲಿ(1966) ಸಚಿವರಾಗಿ, ಇಂದಿರಾಜೀಅವರ ಮಂತ್ರಿಮಂಡಲದಲ್ಲಿ(1966) ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದವರು. ಬಡತನದಲ್ಲಿಯೇ ಬೆಳೆದು ಪ್ರತಿಭೆಯ ಮೂಲಕ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದವರು. ದಿನಕ್ಕೆ 18 ತಾಸು ಕೆಲಸ ನಿರ್ವಹಿಸುತ್ತಿದ್ದಅವರು ಸಂಸತ್ತಿನಲ್ಲಿ ನಡೆಯುವ ಸಭೆಗಳಿಗೆ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದರು.ಕಾರ್ಮಿಕರಉನ್ನತಿಗಾಗಿ ಬೋನಸ್ ವ್ಯವಸ್ಥೆ ಮಾಡಿದ್ದರಿಂದಇವರನ್ನು ಬೋನಸ್ ಸಂಜೀವಯ್ಯನವರೆಂದೇಕರೆಯುತ್ತಿದ್ದರು.ಜ್ಞಾನ ಮತ್ತು ಸೇವೆಯದೃಷ್ಟಿಯಿಂದಅವರದುಅಪರೂಪದ ವ್ಯಕ್ತಿತ್ವವಾಗಿತ್ತು. ಆರ್ಥಿಕ ಸಬಲತೆಗಿಂತಅವರ ಹೃದಯ ವೈಶಾಲ್ಯವೇ ಮುಖ್ಯವಾಗಿತ್ತು.ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವುಕೊಡಮಾಡುವಗೌರವಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ್ದು ಅವರ ಸರಳ ವ್ಯಕ್ತಿತ್ವಕ್ಕೆ ಹಿಡಿದಕನ್ನಡಿಯಾಗಿದೆಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದಧಾರವಾಡಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವಡಾ. ಎ. ಚನ್ನಪ್ಪ, ವಿದ್ಯಾರ್ಥಿಗಳಿಗೆ ಇಂತಹ ನಿಸ್ವಾರ್ಥ ಮನೋಭಾವದ ವ್ಯಕ್ತಿತ್ವದ ಪರಿಚಯವಾಗಬೇಕಾದರೆ ಪಠ್ಯಪುಸ್ತಕಗಳಲ್ಲಿ ಇವರ ಪರಿಚಯಾತ್ಮಕಅಧ್ಯಯನ ಸೇರ್ಪಡೆಯಾಗಬೇಕಾದದ್ದುಅಗತ್ಯವಿದೆ. ಮೌಲ್ಯಯುತ ವ್ಯಕ್ತಿತ್ವದಕಣ್ಮರೆಯಾಗುತ್ತಿರುವುದುಖೇದದ ಸಂಗತಿಯಾಗಿದೆ.ಶಿಕ್ಷಣ ವ್ಯವಸ್ಥೆಯೂಕೂಡ ವ್ಯವಹಾರಿಕದೃಷ್ಟಿಯಿಂದ ಹಾದಿ ತಪ್ಪುತ್ತಿರುವುದುದುರಂತದ ಸಂಗತಿಯಾಗಿದೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದಗೊಟಗೋಡಿಕರ್ನಾಟಕಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ, ಜಾತಿ ವ್ಯವಸ್ಥೆ ವಿರುದ್ದ ವೈಚಾರಿಕಕ್ರಾಂತಿ ಮಾಡಿದ ಬುದ್ಧ, ಬಾಬಾಸಾಹೇಬ ಅಂಬೇಡ್ಕರಅವರ ವಿಚಾರಧಾರೆಗಳನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಪ್ರಾರಂಭದಿಂದ ಇಂದಿನವರೆಗೂ ಶೋಷಣೆ ಒಳಗಾದ ಜನರೇಅಧಿಕವಾಗಿರುವುದನ್ನುಕಾಣುತ್ತೇವೆ. ಶೋಷಣೆಗೆ ವಿರುದ್ಧದನಿ ಎತ್ತಿದ ಸಮುದಾಯ ಗೀತೆಗಳು ಇಂದು ಮರೆಯಾಗಿದೆ.ಮೌಢ್ಯ, ಸಂಪ್ರದಾಯಗಳನ್ನು ಹೋಗಲಾಡಿಸಲುಅಂಬೇಡ್ಕರಅಂಥವರುಅಕ್ಷರಕ್ರಾಂತಿಯನ್ನೇ ಮಾಡಿ ಶಿಕ್ಷಣ ವ್ಯವಸ್ಥೆಯಲ್ಲಿಯೂಕೂಡರಾಷ್ಟ್ರೀಕರಣವಾಗಬೇಕುಎಂದುಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಧಾರವಾಡಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಎಂ.ಎಸ್. ಸಾಳುಂಕೆ ಸಂಜೀವಯ್ಯನವರಒಡನಾಟಕಕುರಿತು ಮಾತನಾಡಿದರು.ವೇದಿಕೆ ಮೇಲೆ ಹುಬ್ಬಳ್ಳಿ ಧಾರವಾಡಘಟಕದರಾಜ್ಯ ಗುಪ್ತ ವಾರ್ತೆಯ ಸಹಾಯಕ ನಿರ್ದೇಶಕ ಬಾಬಾಸಾಹೇಬ ಎನ್. ಹುಲ್ಲನ್ನವರ ಮತ್ತು ಹುಬ್ಬಳ್ಳಿ ರೈಲ್ವೆಆಸ್ಪತ್ರೆ ವೈದ್ಯಾಧಿಕಾರಿಡಾ.ಗೀತಾ ಸುರೇಶ ಹುಲ್ಲನ್ನವರಇದ್ದರು.
ಸರಸ್ವತಿ ಹುಲ್ಲನ್ನವರ ಪ್ರಾರ್ಥಿಸಿದರು.ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಶೈಲಜಾಅಮರಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಶ್ರೀಶೈಲ ಹುದ್ದಾರ, ಡಾ.ಎನ್.ಜಿ. ಬಂಡಿ, ಡಾ.ವ್ಹಿ. ಪಿ.ಸುಣಗಾರ, ರಾಜುಕೋಟೆಣ್ಣವರ, ಡಾ.ಎಸ್.ಜಿ. ಜಾಧವ, ಸುಕನ್ಯಾಕಲ್ಲೂರ, ಮಧು, ಬಸವರಾಜ ಮ.ಬಮ್ಮನಾಳ, ನಿಂಗಣ್ಣಕುಂಟಿ, ಶಶಿಧರ ತೋಡಕರ, ಮಹಾಂತೇಶ ನರೇಗಲ್, ಪ್ರಮೀಳಾ ಜಕ್ಕಣ್ಣವರ, ಶರಣಪ್ಪ ಮೆಣಸಿನಕಾಯಿ ಸೇರಿದಂತೆ ಮುಂತಾದವರಿದ್ದರು.