ಉಪನ್ಯಾಸ ಕಾರ್ಯಕ್ರಮ

ಧಾರವಾಡ,ಜ.17: :ಡಾ. ಆರ್.ಸಿ. ಹಿರೇಮಠಒಬ್ಬ ಶ್ರೇಷ್ಠ ಭಾಷಾ ವಿಜ್ಞಾನಿಗಳು ಮಾತ್ರವಲ್ಲ, ಶರಣ ಸಂಸ್ಕøತಿಯಚಿಂತಕರೂಆಗಿದ್ದರು.ಒಂದುರೀತಿಅವರು ನಡೆದಾಡುವ ವಿಶ್ವಕೋಶದಂತಿದ್ದರು.ಅವರುಆಧುನಿಕಕನ್ನಡ ಸಾಹಿತ್ಯದ ಸೀಮಾಪುರುಷರು ಎಂದು ವಿಶ್ರಾಂತ ಪ್ರಾಧ್ಯಾಪಕಡಾ.ಸಂಗಮನಾಥ ಲೋಕಾಪುರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ರಾ.ಹ. ದೇಶಪಾಂಡೆ ಸಭಾಭವನದಲ್ಲಿಡಾ.ಆರ್.ಸಿ. ಹಿರೇಮಠದತ್ತಿ ಅಂಗವಾಗಿ ಆಯೋಜಿಸಿದ್ದ ಡಾ.ಆರ್.ಸಿ. ಹಿರೇಮಠಅವರ ಬದುಕು-ಬರಹ' ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, ಡಾ.ಆರ್.ಸಿ. ಹಿರೇಮಠ ಬದುಕು ಬರವಣಿಗೆ ಮೀರಿ ಓದಿ ಬೆಳೆದವರು.ಅವರದು ಬಡತನದಲ್ಲಿ ಬೆಂದು ಅರಳಿದ ಬದುಕು.ಬೋಧನೆಯನ್ನುಒಂದುದೊಡ್ಡ ಸಾಧನೆಯನ್ನಾಗಿ ಮಾಡಿದವರು.ಭಾಷಾ ವಿಜ್ಞಾನದಲ್ಲಿಇವರಷ್ಟೇ ಪ್ರಕಾಂಡ ಪಂಡಿತರುಜಗತ್ತಿನಲ್ಲೇಇರಲಿಲ್ಲ. ಅವರ ಸಂಪಾದನೆ, ಅನುವಾದ, ಸಂಶೋಧಿತ ಸೃಜನಶೀಲ ಕೃತಿಗಳ ಸಂಖ್ಯೆ 70ಕ್ಕೂ ಅಧಿಕ.ಅವರಆತ್ಮಕಥೆಉರಿ ಬರಲಿ-ಸಿರಿ ಬರಲಿ’ ಕನ್ನಡದಅತ್ಯುತ್ತಮಆತ್ಮಕಥೆಯಾಗಿ ಹೆಗ್ಗಳಿಕೆ ಹೊಂದಿದೆ.ಅವರೊಬ್ಬತತ್ವನಿಷ್ಠ, ಸತ್ಯನಿಷ್ಠ, ನಿಗರ್ವಿಯಾದ ಸಂಶೊಧಕರಾಗಿದ್ದರು.
ಯಾರ ಪ್ರಭಾವಕ್ಕೂ ಒಳಗಾಗದ ಡಾ. ಆರ್.ಸಿ. ಹಿರೇಮಠರು ಕ.ವಿ.ವಿ.ಯ ಶೈಕ್ಷಣಿಕಗುಣಮಟ್ಟ ಹೆಚ್ಚಿಸಿದವರು.ಕನ್ನಡಅಧ್ಯಯನ ಪೀಠಕಟ್ಟಿ ಬೆಳೆಸುವಲ್ಲಿ ಅವರ ಶ್ರದ್ಧೆ ಪ್ರಾಮಾಣಿಕತೆಯುಅನನ್ಯವಾದುದು.ಕನ್ನಡ ಪ್ರಾಧ್ಯಾಪಕರ ಪಾಲಿನ ನಿಜವಾದದೇವರುಡಾ.ಆರ್.ಸಿ. ಹಿರೇಮಠಆಗಿದ್ದರು.ಸುಮಾರು 40ಕ್ಕೂ ಹೆಚ್ಚು ಪಿ.ಎಚ್.ಡಿ ಪ್ರಬಂಧಕ್ಕೆ ಮಾರ್ಗದರ್ಶನ ಮಾಡಿದ್ದಾರೆ.ಸಂಶೋಧನೆ ಸಂಪಾದನೆಅವರ ಆಸಕ್ತಿ ಕ್ಷೇತ್ರಗಳಾಗಿದ್ದವು.ಅಧ್ಯಾಪನದಜೊತೆ ಅಧ್ಯಯನಶೀಲತೆ ಅವರ ವಿಶೇಷ ಗುಣ. ಕುಲಪತಿಗಳಾಗಿ ಕ.ವಿ.ವಿ. ಯನ್ನುಉನ್ನತ ಮಟ್ಟಕ್ಕೆ ಬೆಳೆಸಿದರು.ಯಾವಟಿಪ್ಪಣಿಇಲ್ಲದೇಕನ್ನಡ ಸಾಹಿತ್ಯದ ಬಗ್ಗೆ ನಿರರ್ಗಳವಾಗಿ ಮಾತಾಡಬಲ್ಲ ಪಾಂಡಿತ್ಯದ್ರುವತಾರೆಯಾಗಿದ್ದರುಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ದ.ರಾ. ಬೇಂದ್ರೆರಾಷ್ಟ್ರೀಯ ಸ್ಮಾರಕಟ್ರಸ್ಟ್‍ಅಧ್ಯಕ್ಷಡಾ.ಡಿ.ಎಂ. ಹಿರೇಮಠ ಮಾತನಾಡಿ, ಡಾ.ಆರ್.ಸಿ. ಹಿರೇಮಠರ ಸಾಧನೆಗೆ ಬಡತನಎಂದೂಅಡ್ಡಿ ಬರಲಿಲ್ಲ. ಬಹುಮುಖ ಪ್ರತಿಭಾ ಸಂಪನ್ನರಾದಅವರುಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದರು. ಹಸ್ತಪ್ರತಿ ಭಂಡಾರ ಸ್ಥಾಪಿಸಿ 10 ಸಾವಿರಕ್ಕೂ ಹೆಚ್ಚು ಹಸ್ತಪ್ರತಿ ಸಂಗ್ರಹಿಸಿದರು ಎಂದು ಹೇಳಿದರು.
ಸಹ ಕಾರ್ಯದರ್ಶಿ ಶಂಕರ ಕುಂಬಿ ಸ್ವಾಗತಿಸಿದರು.ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿದತ್ತಿದಾನಿ ಡಾ.ಶಶಿಕಲಾ ಹಿರೇಮಠ, ಬಸಯ್ಯ ಶಿರೋಳ, ನಿಂಗಣ್ಣಕುಂಟಿ, ಎಂ.ಎಂ.ಚಿಕ್ಕಮಠ, ಇಂದುಧರ ಹಿರೇಮಠ, ಸೀತಾರಾಮ ಶೆಟ್ಟಿ, ಮಹಾಂತೇಶ ನರೇಗಲ್, ಅಶೋಕ ನಿಡವಣಿ, ಎಸ್.ಕೆ.ಕುಂದರಗಿ, ರಾಮಚಂದ್ರಗೆದ್ದೆಣ್ಣವರ, ಸಂಗಪ್ಪ ಗಾಳಿ ಸೇರಿದಂತೆ ಮುಂತಾದವರಿದ್ದರು.