ಉಪನ್ಯಾಸಕ ಭವನದ ಭರವಸೆ ನೀಡಿದ ಸಚಿವ ರಹೀಂ ಖಾನ್

ಬೀದರ್ :ಜೂ.13: ಬೀದರ್ ಜಿಲ್ಲಾ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದ ವತಿಯಿಂದ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘಗಳಿಂದ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಜಿಲ್ಲೆಯಲ್ಲಿ ಪದವಿ ಪೂರ್ವ ಪ್ರಾಂಶುಪಾಲ ಸಂಘ ಹಾಗೂ ಉಪನ್ಯಾಸಕರ ಸಂಘದ ಕೆಲಸ ಕಾರ್ಯಗಳಿಗೆ ಭವನದ ಅವಶ್ಯಕತೆಯಿದೆ. ಚಿಕ್ಕ ಪುಟ್ಟ ಸಭೆ ಸಮಾರಂಭಗಳಿಗೆ ಭವನ ಜರೂರಿಯಾಗಿದ್ದು, ಅದನ್ನು ನಿರ್ಮಿಸುವಂತೆ ಮನವಿ ಮಾಡಿಕೊಂಡರು.

ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ರಹೀಂ ಖಾನ್ ಉಪನ್ಯಾಸಕ ಭವನದ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಮನ್ಮತ್ ಡೋಳೆ, ಅಶೋಕ ರಾಜೊಳೆ, ಖಜಾಂಚಿ ಸಂಗಪ್ಪ ಕೋರೆ, ಓಂಕಾರ್ ಸೂರ್ಯವಂಶಿ, ಬಸವರಾಜ್ ಮಯೂರ್, ರಾಜಕುಮಾರ್ ಪಾಟೀಲ್, ಡಿ.ಜೆ ಬಿರಾದರ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿ ಉಪಸ್ಥಿತರಿದ್ದರು.