ಉಪನ್ಯಾಸಕ ಪ್ರಶಾಂತ್‌ಗೆ ಡಾಕ್ಟರೇಟ್ ಪದವಿ 

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೯; ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ  ಬಿ.ಇ.ಎಸ್‌.ಎಂ. ಮಹಾವಿದ್ಯಾಲಯದ ಶಿಕ್ಷಣಶಾಸ್ತ್ರ  ವಿಭಾಗದ ಉಪನ್ಯಾಸಕ ಎನ್. ಎಸ್. ಪ್ರಶಾಂತ ಅವರಿಗೆ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ, ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಡಾ.ಟಿ.ಎಂ. ಪ್ರಶಾಂತಕುಮಾರ ಇವರ ಮಾರ್ಗದರ್ಶನದಲ್ಲಿ ‘ಎ ಸ್ಟಡಿ ಆಫ್‌ ಟೀಚರ್‌ ವ್ಯಾಲ್ಯೂಸ್ ಟೀಚರ್‌ ಮೋಟಿವೇಶನ್ ಆನ್ ಟೀಚರ್‌ ಸೆಲ್ಪ್ – ಎಫಿಕೆಸಿ  ಅಮೊಂಗ್ ಟೀಚರ್‌ ಎಜುಕೇಟರ್ಸ್‌’ ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಸದರಿ ವಿಷಯದ ಕುರಿತು ಸತತ ಅಧ್ಯಯನ ನಡೆಸಿ 2024 ರ ಮಾರ್ಚನಲ್ಲಿ ಪ್ರಬಂಧ ಮಂಡಿಸಿದ್ದರು. ಪ್ರಶಾಂತ್ ಅವರ ಸಾಧನೆಗೆ ಬಿ.ಇ.ಎಸ್. ಎಂ. ಕಾಲೇಜು ಆಡಳಿತ ಮಂಡಳಿ ಸೇರಿ ಪ್ರಾಚಾರ್ಯರು ಅಭಿನಂದಿಸಿದೆ.