ಉಪನ್ಯಾಸಕರು ಅಪಡೇಟ್ ಆಗುವುದು ಅಗತ್ಯ:ಡಾ.ಪವಾರ

ಭಾಲ್ಕಿ:ಏ.28:ಉಪನ್ಯಾಸಕರು ವಿದ್ಯಾರ್ಥಿಗಳ ಆಸೆ-ಆಕಾಂಕ್ಷೆ ,ಪಾಲಕರ ಮತ್ತು ಸಮಾಜದ ನಿರೀಕ್ಷೆ ,ಅಪೇಕ್ಷೆಗಳಂತೆ ಬದಲಾಗಿ ಅಪಡೇಟ್ ಆಗುವುದು ಇಂದು ಅಗತ್ಯವಾಗಿದೆ ಎಂದು ಮಕ್ಕಳತಜ್ಞ ಹಾಗೂ ರೋಟರಿ ಕಲ್ಯಾಣ ಝೋನದ ಸಹಾಯಕ ಗವರ್ನರ್ ಡಾ.ವಸಂತ ಪವಾರ ಅಭಿಪ್ರಾಯಪಟ್ಟರು.
ಡೈಮಂಡ ಕಾಲೇಜಿನವರು ಪಟ್ಟಣದ ಪ್ರಯಾಗ ಫಂಕ್ಷನ್ ಹಾಲನಲ್ಲಿ 2023-24 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬರೀ ಅಂಕಗಳು ,ರ್ಯಾಂಕುಗಳಿಗಾಗಿ ಅಗ್ರಸ್ಥಾನ ಪಡೆಯುವ ಸ್ಪರ್ಧಾ ಪೈಪೋಟಿಗಾಗಿ ಕಲಿಯದೇ ಅರ್ಥಪೂರ್ಣವಾದ ಜೀವನ ನಡೆಸಲು ಬೇಕಾದ ಜೀವನ ಕಲೆಯನ್ನು ಅರಿತುಕೊಳ್ಳುವ ಧಾವಂತ ಶಿಕ್ಷಕ-ಮಕ್ಕಳÀಲ್ಲಿ ಬೇಕು. ಡೈಮಂಡ ಕಾಲೇಜಿನ ಮಕ್ಕಳು ಪ್ರಸ್ತುತ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿದ್ದು ಸಂತೋಷದ ಸಂಗತಿಯಾಗಿದೆ ಎಂದರು.
ಎಸ್.ಎಸ್.ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಮಸ್ತಾನವಲಿ ಮಾತನಾಡಿ,ಕೇವಲ 17 ವಿದ್ಯಾರ್ಥಿಗಳಿಂದ 2009-10 ರಲ್ಲಿ ಆರಂಭಗೊಂಡ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತವಾಗಿ ಏಳು ಸಾವಿರ ಮಕ್ಕಳು ಅಧ್ಯಯನ ಗೈಯುತ್ತಿದ್ದು,800 ಜನ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.ಪಿಯು ಫಲಿತಾಂಶ ಪ್ರತಿವರ್ಷ ಹೆಚ್ಚುಗೊಳ್ಳುವಲ್ಲಿ ಸರ್ವ ಸಿಬ್ಬಂದಿಯವರ ತ್ಯಾಗ ಮತ್ತು ಪರಿಶ್ರಮ ಅಡಗಿದೆ ಎಂದರು.
ಪ್ರಾಂಶುಪಾಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ರಾಜೋಳೆ ಮಾತನಾಡಿ, ಡೈಮಂಡ ಕಾಲೇಜಿನ ಕು.ರುಚಿತಾ ಸಂಜುಕುಮಾರ 600ಕ್ಕೆ 589 ಅಂಕ ಪಡೆದು ಕಾಲೇಜಿಗೆ ಪ್ರಥಮರಾಗಿದ್ದು,ಲೋಕೇಶ ಗಣೇಶ ಶೇ.98 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದು ಹೆಮ್ಮೆಯ ಸಂಗತಿಯಾಗಿದೆ.ಗುಣಮಟ್ಟದ ಫಲಿತಾಂಶದೊಂದಿಗೆ ಬೀದರ ಜಿಲ್ಲೆ ರಾಜ್ಯಕ್ಕೆ 19ನೇ ಸ್ಥಾನ ಪಡೆದಿದ್ದು ಖುಷಿಯ ಸಂಗತಿ.ಡೈಮಂಡ ಶಿಕ್ಷಣ ಸಂಸ್ಥೆಯವರು ಗ್ರಾಮೀಣ ರೈತಾಪಿ ಕುಟುಂಬದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಡಾಕ್ಟರ್,ಇಂಜಿನೀಯರ್ ,ಸೈಂಟಿಸ್ಟ್ ಆಗುವ ಭಾಗ್ಯ ಕಲ್ಪಿಸಿದ್ದಾರೆ ಎಂದರು.
ತಾಲೂಕು ಪ್ರಾಚಾರ್ಯರ ಸಂಘದ ಅಧ್ಯಕ್ಷ ಜೈಕಾಂತ ಗಂಗೋಜಿ ಮತ್ತು ಪ್ರಾಚಾರ್ಯ ಧನರಾಜ ನಿಲಂಗೆ ಮಾತನಾಡಿ,ಮಸ್ತಾನ ವಲಿ ಮತ್ತು ಮಾಧವರಾವ ಅವರು ಜೋಡೆತ್ತುಗಳ ಹಾಗೆ ಸಮಾನ ಮನಸ್ಸಿನಿಂದ ಕಾರ್ಯನಿರ್ವಹಿಸಿ ಕ-ಕ ಭಾಗದಲ್ಲಿ ಅಕ್ಷರ ಕ್ರಾಂತಿ ಎಬ್ಬಿಸಿದ್ದಾರೆ ಎಂದು ಹೇಳಿ,ಅವರ ಶೈಕ್ಷಣಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪಿಯು ಮಕ್ಕಳ ಏಕಪಾತ್ರ್ರಭಿನಯ,ಮೂಕ ನಾಟಕ,ಬಂಗಾಲಿ,ಪಂಜಾಬಿ ಡ್ಯಾನ್ಸ್ ಮತ್ತು ಭಾಷಣ ಎಲ್ಲರ ಗಮನ ಸೆಳೆಯಿತು.
ಸನ್ಮಾನ:ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಮೊಮೆಂಟೋ,ಪೇಟಾ,ಶಾಲು,ಮಾಲೆಯೊಂದಿಗೆ ಸನ್ಮಾನಿಸಿ,ಗೌರವಿಸಲಾಯಿತು.
ಡೈಮಂಡ ಗ್ರುಪ ಆಫ್ ಇನಸ್ಟಿಟ್ಯೂಷನ್ ಅಧ್ಯಕ್ಷ ವೈ.ಮಾಧವರಾವ,ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಸುಖದೇವ ಬಿರಾದಾರ,ಗೌಸಿಯಾ ಮೆಡಮ್,ಮುಖ್ಯ ಆಡಳಿತಾಧಿಕಾರಿ ಅಶ್ವೀನ ಭೋಸ್ಲೆ,ಆಡಳಿತಾಧಿಕಾರಿ ಜ್ಞಾನೇಶ್ವರ ಬಿರಾದಾರ,ಗಿರೀಶ ಭಂಢಾರಿ,ಮಂಜುನಾಥ ಜೋಳದಾಪ್ಕೆ,ಶೇಖ ರಹೆಮಾನ,ಶೇಖ ಕರೀಮ ಸೇರಿದಂತೆ ವಿದ್ಯಾರ್ಥಿ,ಪಾಲಕರು ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ರಾಜಶೇಖರ ಮತ್ತು ಪ್ರೊ.ರಂಜಿತ ಪುರಿ ಸ್ವಾಗತಿಸಿದರು.ಪ್ರೊ.ನಾಮದೇವ ಮೋರೆ ವಂದಿಸಿದರು.

“ಗ್ರಾಮೀಣ ಭಾಗದ ಬಡ,ರೈತಾಪಿ ಕುಟುಂಬದ ಮಕ್ಕಳಿಗೆ ಕೌಶಲ್ಯ ಮತ್ತು ತಾಂತ್ರಿಕಾಧಾರಿತ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ಅಲ್ಪಾವಧಿಯಲ್ಲಿ ಡೈಮಂಡ್ ಶಿಕ್ಷಣ ಸಂಸ್ಥೆ ಅಷ್ಟೊಂದು ಎತ್ತರಕ್ಕೆ ಬೆಳೆಸುವಲ್ಲಿ ಸಮಸ್ತ ಸಿಬ್ಬಂದಿ ವರ್ಗದವರ, ಪಾಲಕರ, ಸಾರ್ವಜನಿಕರ ಸಹಕಾರ, ಪ್ರೋತ್ಸಾಹ ಮುಖ್ಯವಾಗಿದೆ.”-ಕೆ.ಮಸ್ತಾನ ವಲಿ, ಅಧ್ಯಕ್ಷರು, ಡೈಮಂಡ್ ಶಿಕ್ಷಣ ಸಂಸ್ಥೆ ಭಾಲ್ಕಿ.