ಉಪನ್ಯಾಸಕರಿಗೆ ಕೋವಿಡ್ ಟೆಸ್ಟ್

ಲಕ್ಷ್ಮೇಶ್ವರ,ನ18- ಪಟ್ಟಣದ ಸವಣೂರು ರಸ್ತೆಯಲ್ಲಿ ಇರುವ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪಾ ಎಂ ಅಗಡಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಮೊದಲ ದಿನವಾದ ಮಂಗಳವಾರ ಕಾಲೇಜಿನಲ್ಲಿ ಉಪನ್ಯಾಸಕರುಗಳಿಗೆ ಕೋವಿಡ್-19 ಟೆಸ್ಟ್ ನಡೆಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ಕೋವಿಡ್-19 ಉಪಕರಣಗಳೊಂದಿಗೆ ಸುಮಾರು 70ಕ್ಕೂ ಹೆಚ್ಚು ಉಪನ್ಯಾಸಕರಿಗೆ ಹಾಗೂ. ಸಿಬ್ಬಂದಿ ವರ್ಗದವರಿಗೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಲಾಯಿತು ಈ ಟೆಸ್ಟ್ ನ ವರದಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು 3 ದಿನಗಳ ನಂತರ ವರಿದ ಕೈ ಸೇರಲಿದ್ದು ಇದರಲ್ಲಿ ಯಾರಿಗೆ ಪಾಸಿಟಿವ್ ಯಾರಿಗೆ ನೆಗೆಟಿವ್ ಎಂಬುದು ಖಚ್ಚಿತವಾಗಲಿದೆ ಎಂದು ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.