ಉಪನೋಂದಣಾಧಿಕಾರಿ ಕಛೇರಿ ಮೇಲೆ ಎಸಿಬಿ ದಾಳಿ

ಇಂಡಿ: ಆ.4:ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಇಂಡಿ ಪಟ್ಟಣದ ಎರಡನೇ ಮಹಡಿಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಛೇರಿ ಮೇಲೆ ಬುದುವಾರ ಎಸಿಬಿ ಅಧಿಕಾರಿಗಳು ದಿಢೀರ ದಾಳಿ ಮಾಡಿ ದಾಖಲೆಗಳನ್ನು ಪರಿಸಿಲೀಸಿದರು. ಈ ಕಛೇರಿಯಲ್ಲಿ ಜಮೀನು ಖರಿದಿ ಸೇರಿದಂತೆ ವಿವಿಧ ಪ್ರಮಾಣ ಪತ್ರ ನೋಂದಣಿ ಮಾಡಲು ವ್ಯಾಪಕ ಲಂಚಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಹಿನ್ನಲೆಯಲ್ಲಿ ಎಸಿಬಿ ಎಸ್ಪಿ ಅನಿತಾ ಹದ್ದಣ್ಣವರ, ಡಿವೈಎಸ್ಪಿ ಅರುಣ ನಾಯಕ, ಇನ್ಸಪೆಕ್ಟರ್ಗಳಾದ ಆನಂದ ಟಕ್ಕಣ್ಣವರ, ಆನಂದ ಡೋಣಿ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿಗಳಾದ ಮಹಮ್ಮದರಫಿ ಪಟೇಲ ಹಾಗೂ ಇತರ ಏಜೆಂಟರಗಳಿಗೆ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ಹಲವು ಮಾಹಿತಿ ಪಡೆದುಕೋಂಡು ಹಲವಾರು ದಾಖಲೆಗಳನ್ನು ಪರಿಶೀಲಿಸಿದರು.