ಉಪಚುನಾವಣೆ ಬಿಜೆಪಿಯಿಂದ ಮನೆ ಮನೆಗೆ ಬಿರುಸಿನ ಪ್ರಚಾರ

ಹನೂರು:ಮಾ.26-ಪಟ್ಟಣ ಪಂಚಾಯತಿ ಎರಡನೇ ವಾರ್ಡಿನ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗುರುಸ್ವಾಮಿ ಪರವಾಗಿ ಮಾಜಿ ಶಾಸಕಿ ಪರಿಮಳಾನಾಗಪ್ಪ, ಜಿಲ್ಲಾ ಉಪಾಧ್ಯಕ್ಷ ಡಾ. ದತ್ತೇಶ್‍ಕುಮಾರ್ ಬಿರುಸಿನ ಪ್ರಚಾರ ಕೈಗೊಂಡು ಪ್ರತಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಎರಡನೇ ವಾರ್ಡಿನ ಸದಸ್ಯ ನಾಗರಾಜು ಮೃತಪಟ್ಟಿದ್ದ ಹಿನ್ನೆಲೆ, ಇದೆ ತಿಂಗಳ 29ರಂದು ಉಪಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಪರವಾಗಿ ಮುಖಂಡರುಗಳು ಭರ್ಜರಿ ಮತ ಪ್ರಚಾರನಡೆಸುತ್ತಿದ್ದಾರೆ. ಮತಯಾಚನೆ ವೇಳೆ ಜಿಲ್ಲಾ ಉಪಾಧ್ಯಕ್ಷ ಡಾ. ದತ್ತೇಶ್‍ಕುಮಾರ್ ಮತಾನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್ 19ರ ನಡುವೆಯೂ ಉತ್ತಮ ಬಜೆಟ್ಮಂಡನೆ ಮಾಡಿರುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ, ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಕೃಷಿ ಮಾರುಕಟ್ಟೆಗೆ ಒತ್ತುನೀಡಿರುವುದರಿಂದ ಈಭಾಗದ ರೈತರಿಗೆ ಹಾಗೂಪ್ರವಾಸಿಗರಿಗೆ ತುಂಬಾ ಅನುಕೂಲವಾಗಲಿದೆ, ಹನೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಪಕ್ಷದವರು ಅಧ್ಯಕ್ಷರಾಗಿರುವುದರಿಂದ ಈವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ, ಆದ್ದರಿಂದ ಈ ವಾರ್ಡಿನ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ, ಒಬಿಸಿಮೋರ್ಚಾದ ಅಧ್ಯಕ್ಷ ನಟರಾಜಗೌಡ, ಪಟ್ಟಣ ಪಂಚಾಯಿತಿ ಸದಸ್ಯ ರೂಪ, ಮುಖಂಡರುಗಳಾದ ವೆಂಕಟೇಗೌಡ, ರಮೇಶ್ನಾಯ್ಡು, ಸುಬ್ಬಣ್ಣ ಸುದರ್ಶನ್, ಶಂಕರಣ್ಣ, ಪ್ರಸನ್ನ ಕುಳ್ಳಪ್ಪ, ನಾಗೇಂದ್ರ, ನಂಜಪ್ಪ , ಕರಿಕಲ್ಲು ಮಹದೇವ್, ಪುಟ್ಟರಾಜು, ಗೋವಿಂದ ಇನ್ನಿತರರು ಹಾಜರಿದ್ದರು.