ಉಪಚುನಾವಣೆ ಜನತೀರ್ಪು ಒಪ್ಪಿಕೊಳ್ಳುತ್ತೇವೆ: ಸಚಿವ ನಿರಾಣಿ

ಕಲಬುರಗಿ:ನ.02:ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತದಾರರ ಪ್ರಭುಗಳು ನೀಡಿರುವ ತೀರ್ಪು ಒಪ್ಪಿಕೊಳ್ಳುತ್ತೇವೆ ಮತ್ತು ತಲೆ ಬಾಗುವೆ ಎಂದು ಬೃಹತ್ ಕೈಗಾರಿಕೆ ಸಚಿವ ಮರುಗೇಶ ನಿರಾಣಿ ಹೇಳಿದರು.
ಮಂಗಳವಾರ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ್ದ ಅವರು ಬೀಳಗಿಗೆ ತೆರಳುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿ, ಎರಡು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ, ಒಂದು ಕಡೆ ಮಾತ್ರ ಗೆದ್ದಿz್ದÉೀವೆ ಎಂದರು.
ಸಿಂದಗಿಯಲ್ಲಿ ಭಾರಿ ಬಹುಮತದಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಹಾನಗಲ್‍ದಲ್ಲಿ ಉತ್ತಮ ಪೈಪೆÇೀಟಿ ನೀಡಿದ್ದು, ಅಲ್ಪ ಮತಗಳಿಂದ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಹಾನಗಲ್‍ದಲ್ಲಿ ಎಲ್ಲಿ ನಾವು ಎಡವಿz್ದÉೀವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಸಿ.ಎಂ.ಉದಾಸಿ ಅವರು ಧೀರ್ಘಕಾಲ ಅನಾರೋಗ್ಯಕ್ಕೊಳಗಾಗಿದ್ದರು, ಹೀಗಾಗಿ ಒಂದಿಷ್ಟು ಅಭಿವೃದ್ಧಿ ಕೆಲಸಗಳಿಗೆ ಮತ್ತು ಜನ ಸಂಪರ್ಕ ಕಡಿಮೆಯಾಗಿರಬಹುದು ಅಷ್ಟೆ. ಹೊರತು ಹಾನಗಲ್ ಫಲಿತಾಂಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಿನ್ನೆಡೆಯಾಗಿದೆ ಎನ್ನುವಂತಿಲ್ಲ. ಅದು ಹಿನ್ನೆಡೆಯು ಅಲ್ಲ. ಬಿಜೆಪಿ ಅಭ್ಯರ್ಥಿ ಪ್ರಬಲ ಪೈಪೆÇೀಟಿ ನೀಡಿz್ದÉೀವೆ. ಕೆಲವೊಂದು ಸಲ ನಿರೀಕ್ಷೆ ಏರುಪೇರಾಗುತ್ತದೆ.ಇದು ಮುಂದಿನ ಸಲ ನಾವು ಅಲ್ಲಿ ಗೆಲ್ಲಲು ಪ್ರೇರಣೆಯಾಗಲಿದೆ ಎಂದು ನಿರಾಣಿ ಹೇಳಿದರು.
ಸಿಂದಗಿ ಕ್ಷೇತ್ರದಲ್ಲಿ ಅನುಕಂಪ ಅಲೆ ಕೆಲಸ ಮಾಡಲಿಲ್ಲ. ಅಲ್ಲಿನ ಮತದಾರರು ಬಿಜೆಪಿ ಸರ್ಕಾರಕ್ಕೆ ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಕೆ ಸಿಕ್ಕ ಜನಬೆಂಬಲವಾಗಿದೆ ಎಂದು ತಿಳಿಸಿದರು.
ಶಾಸಕರಾದ ಬಿ.ಜಿ.ಪಾಟೀಲ್, ರಾಜಕುಮಾರ ಪಾಟೀಲ್ ತೆಲ್ಕೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉೀವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಮುಖಂಡರಾದ ಡಾ.ಮಹೇಂದ್ರಕುಮಾರ ಕೋರಿ ಮುತ್ತಗಾ ಇತರರಿದ್ದರು