
ಕಲಬುರಗಿ ಏ ೩: ಮೂರೂ ಉಪಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.ಬಸವಕಲ್ಯಾಣ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಅವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಶ್ವರಪ್ಪ ,ಯತ್ನಾಳ ಹೇಳಿಕೆಗಳು ಉಪ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ.
ನಮ್ಮಲ್ಲಿ ಅಭಿಪ್ರಾಯಭೇದಗಳಿವೆಯೇ ಹೊರತು ಭಿನ್ನಾಭಿಪ್ರಾಯಗಳಿಲ್ಲ.ಇದಕ್ಕೂ ಉಪಚುನಾವಣೆಗೂ ಸಂಬಂಧವೇ ಇಲ್ಲ.ಇವತ್ತಿಗೂ ಬಿಜೆಪಿ ಶಿಸ್ತಿನ ಪಕ್ಷವೇ.ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಹಳ ಚೆನ್ನಾಗಿದೆ.ವ್ಯತ್ಯಾಸಗಳಿರುವುದನ್ನು ಸರಿಪಡಿಸಲು ನಮ್ಮಲ್ಲಿ ವ್ಯವಸ್ಥೆ ಇದೆ
ಹಾಗಾಗಿ ಎಲ್ಲವೂ ಸರಿಯಾಗುತ್ತೆ ಎಂದರು.
ಕಾಂಗ್ರೆಸ್ ನಲ್ಲಿ ಬೆಂಕಿ ಬಿದ್ದಿದೆ.ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ.ಸಿದ್ರಾಮಯ್ಯ ಮುಂದಿನ ಸಿಎಂ ಅಲ್ಲ ಎಂದು ನಾನು ಮುಂದಿನ ಸಿಎಂ ಅಂತ ಡಿಕೆ ಶಿವಕುಮಾರ ಟ್ವಿಟ್ ಮಾಡಿದ್ದಾರೆ.ನಮ್ಮ ಪಾರ್ಟಿಗೊಂದು ಸಂಸ್ಕಾರ ಇದೆ.ಅವರ ಪಾರ್ಟಿಗೂ ಒಂದು ಸಂಸ್ಕಾರ ಇದೆ.ಅವರವರ ಪಾರ್ಟಿಯ ಸಂಸ್ಕಾರ ದಂತೆ ಅವರವರು ಮಾತನಾಡುತ್ತಾರೆಎಂದು ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.
ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ.ತನಿಖೆಯ ದಾರಿ ತಪ್ಪಿಸಲು ಅವಕಾಶ ಕೊಡಲಾಗದು.ಎಸ್ ಐಟಿ ಮೇಲೆ ನಮಗೆ ಸಂಪೂರ್ಣ ನಂಬಿಕೆ, ವಿಶ್ವಾಸ ಇದೆ
ಕಾನೂನು ಪ್ರಕಾರ ಎಲ್ಲ ಕ್ರಮಗಳೂ ಆಗುತ್ತವೆ. ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದರು