ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಖಚಿತ; ಸತೀಶ್ ಜಾರಕೀಹೊಳೆ ವಿಶ್ವಾಸ.


ಜಗಳೂರು.ನ.೧; ರಾಜ್ಯದಲ್ಲಿನ ಸಿಂಧಗಿ,ಹಾನಗಲ್ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ  ಗೆಲುವು ಖಚಿತ ಮುಂಬರುವ  ಚುನಾವಣೆಗಳಿಗೆ ದಿಕ್ಸೂಚಿಯಾಗಲಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳೆ ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಇಂದಿರಾಗಾಂಧಿ ಅವರ 37 ನೇ ಪುಣ್ಯಸ್ಮರಣೆ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಅವರು ಮಾತನಾಡಿದರು.1972 ರಲ್ಲಿ ಸೋತಂತ ಕಾಂಗ್ರೆಸ್ ಪಕ್ಷವನ್ನು ತಮ್ಮ ನೇತೃತ್ವದಲ್ಲಿ ಪಕ್ಷ ಸಂಘಟನೆ‌ಗೊಳಿಸಿ 1980 ಜನೆವರಿ 14 ರಂದು ಪುನಃ ಪ್ರಧಾನಿಯಾದರು.ಇಂದಿರಾಗಾಂಧಿ ಅವರ ಆದರ್ಶಗಳು ಹಾಗೂ  ಪಕ್ಷ ಸಂಘಟನೆ ಚತುರತೆ ಇಂದಿಗೂ ಜೀವಂತವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಮಾದರಿಯಾಗಿವೆ.ಇಂದಿರಾಗಾಂಧಿ ಅವರು ಮಹಾನ್ ನಾಯಕಿಯಾಗಿ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಬಲವರ್ಧನೆಗೊಳಿಸಿ ಮುಂಬರುವ  ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಕರೆನೀಡಿದರು.ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದಾಗಲೂ ತಾಲೂಕಿನಿಂದ ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಅದ್ದೂರಿಯಾಗಿ ಸ್ವಾಗತಿಸಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ಮಾನವ ಬಂಧುತ್ವ ವೇದಿಕೆಯ ಮುಖಾಂತರ ಸಮಾಜವನ್ನು ಜಾಗೃತಿ ಗೊಳಿಸುತ್ತಿರುವ ಮಾನ್ಯ ಸತೀಶ್ ಜಾರಕೀಹೊಳೆ ಅವರ ಚಿಂತನೆ ಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.ಇಂದು ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿರುವುದು ಪುಣ್ಯದ ದಿನವಾಗಿದೆ.ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಕೆಲಸಗಳ ಪ್ರಚಾರದ ಕೊರತೆಯಿಂದ ಸೋಲು ಅನುಭವಿಸುವಂತಾಯಿತು.ಇದೀಗ ದೇಶದಲ್ಲಿನ ಬಿಜೆಪಿ ಆಡಳಿತದಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ.ಮುಂದಿನ ಚುನಾವಣೆಗಳಲ್ಲಿ
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸರ್ವರೂ ಶ್ರಮಿಸೋಣಎಂದರು. ಈಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಕೆ.ಪಿ.ಸಿ.ಸಿ ಎಸ್ ಟಿ ಘಟಕದ ರಾಜ್ಯಟಧ್ಯಕ್ಷ ಕೆ.ಪಿ.ಪಾಲಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಮಂಜುನಾಥ್,ಷಂಷೀರ್ ಅಹಮ್ಮದ್,ಸಮಾಜ ಸೇವಕ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಉಪಸ್ಥಿತರಿದ್ದರು.