ಉಪಚುನಾವಣೆಯನ್ನು ಸವಲಾಗಿ ಸ್ವೀಕರಿಸಿ ಒಗ್ಗಟ್ಟಾಗಿ ಎದುರಿಸಿ: ಶಾಸಕ ದರ್ಶನ್

ಸಂಜೆವಾಣಿ ವಾರ್ತೆ
ನಂಜನಗೂಡು: ಡಿ.10:- ಪ್ರವಾಸಿ ಮಂದಿರದಲ್ಲಿ 20 ನೇ ವಾರ್ಡ್‍ನ ಉಪಚುನಾವಣೆ ಅಂಗವಾಗಿ ಪೂರ್ವಭಾವಿ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ರವರು ಪಕ್ಷದ ಮುಖಂಡರು, ನಗರ ಸಭೆ ಹಾಲಿ ಸದಸ್ಯರು ಮಾಜಿ ಸದಸ್ಯರು ಮಾಜಿ ಅಧ್ಯಕ್ಷರು ಕಾರ್ಯಕರ್ತರ ಜೊತೆ ಸಭೆ ನಡೆಸಿ ಚರ್ಚಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಲಿ ಅವರ ಗೆಲುವಿಗೆ ನಿಮ್ಮಲ್ಲಿ ಏನೇ ಮನಸ್ತಾಪ ಇದ್ದರೂ ಕೂಡ ದೂರ ಮಾಡಿ ಎಲ್ಲರೂ ಕೈಜೋಡಿಸಿ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಮನವಿ ಮಾಡಿದರು.
ನಮ್ಮ ತಂದೆ ಅನಾರೋಗ್ಯ ಇದ್ದರು ಕೂಡ ಪಕ್ಷಕ್ಕಾಗಿ ದುಡಿದವರು ಪಕ್ಷಕ್ಕೆ ಪ್ರಾಣತ್ಯಾಗ ಮಾಡಿದರು ನಮ್ಮ ತಂದೆಯಂತೆ ನಾನು ಕೂಡ ಅವರ ದಾರಿಯಲ್ಲೇ ಸಾಗುತ್ತಿದ್ದೇನೆ ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ
ಈ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ದೊರೆಸ್ವಾಮಿ ಚುನಾಯಿತರಾಗಿದ್ದರು ನಮ್ಮ ತಂದೆಯವರು ವಿಧಾನಸಭಾ ಕ್ಷೇತ್ರಕ್ಕೆ ನಿಲ್ಲಲು ಸಿದ್ಧತೆ ಮಾಡಿಕೊಂಡಿದ್ದ ಸಂದರ್ಭದಲ್ಲಿ ತಂದೆಯವರ ಪರ ದುಡಿಯಲು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದಿದ್ದರಂತೆ ಆದರೆ ತಂದೆಯವರು ತೀರಿಕೊಂಡ ನಂತರ ನನ್ನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೇರುತ್ತೇನೆ ಎಂದಾಗ ಇನ್ನು ನಿಮ್ಮ ಅವಧಿ ಎರಡು ವರ್ಷ ಇದೆ ಬೇಡ ಅಂತ ಹೇಳಿದೆ ಆದರೂ ಕೂಡ ಸ್ವತಂತ್ರವಾಗಿ ಮರಳಿ ಪಕ್ಷಕ್ಕೆ ಬರುತ್ತೇನೆ ಎಂದು ಸದಸ್ತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬಂದು ನನ್ನ ಚುನಾವಣೆಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಅದೇ ರೀತಿ ನಾವು ಕೂಡ ಉಪಚುನಾವಣೆಯಲ್ಲಿ ಗೆಲ್ಲಲು ನಾವು ಕೂಡ ಇವರಿಗೆ ಶಕ್ತಿಮೀರಿ ಕೆಲಸ ಮಾಡಿ ಗೆಲ್ಲಲು ಸಹಕರಿಸಿ ಎಂದರು.
ನಾನು ಅಧಿವೇಶನ ಮುಗಿಸಿಕೊಂಡು ಬರುತ್ತೇನೆ ಬಂದ ನಂತರ ಸಂಪೂರ್ಣವಾಗಿ ನಿಮ್ಮ ಜೊತೆಯಲ್ಲೇ ಇದ್ದು ಉಪಚುನಾವಣೆಯ ಪಕ್ಷದ ಅಭ್ಯರ್ಥಿ ಗೆಲ್ಲಲು ನಿಮ್ಮ ಜೊತೆಯಲ್ಲೇ ಇರುತ್ತೇನೆ ಅಲ್ಲಿಯತನಕ ಪಕ್ಷದ ಮಾಜಿ ಶಾಸಕರಾದ ಕಳಲೆ ಕೇಶವ ಮೂರ್ತಿ ಅವರ ನೇತೃತ್ವದಲ್ಲಿ ವಾರ್ಡಿನ ಚರ್ಚಿಸಿ ಕೆಲಸ ಮಾಡುತ್ತೀರಿ ಎಂದು ಸೂಚಿಸಿದರು.
ಪ್ರತಿಯೊಬ್ಬರೂ ಕೂಡ ನಾವೇ ಅಭ್ಯರ್ಥಿ ಎಂದು ಪಕ್ಷದ ಅಭ್ಯರ್ಥಿ ಪರ ಪ್ರಚಾರ
ಮಾಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು
ಈ ವಾರ್ಡಿನಲ್ಲಿ ಎರಡು ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆದ್ದಿದ್ದಾರೆ ಈ ಬಾರಿ ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಗೆಲ್ಲಬೇಕು ಎಂದು ಪ್ರತಿ ಮನೆಮನೆಗೂ ತೆರಳಿ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ನೀಡಿರುವ ಗ್ಯಾರಂಟಿಗಳ ಬಗ್ಗೆ ತಿಳಿಸಿ ಮನವರಿಕೆ ಮಾಡಿಕೊಡಿ ಪಕ್ಷದ ಅಭ್ಯರ್ಥಿ ಗೆಲ್ಲಲು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಹೇಶ್ ಮಾತನಾಡಿ ನಗರಸಭೆಯಿಂದ ಮನೆ ಮನೆಗೆ 24*7 ನೀರಿನ ಬಿಲ್ ಯಥೇಚ್ಛವಾಗಿ ಬರುತ್ತಿರುವುದನ್ನು ತಡೆಯಬೇಕು ತಿಂಗಳಿಗೆ 125 ನಿಗದಿ ಮಾಡಿದ್ದೇವೆ ನಗರಸಭೆ ಮೀಟಿಂಗ್ನಲ್ಲಿ ಆದರೆ ಜಿಲ್ಲಾಧಿಕಾರಿಗಳು ಆದೇಶದಂತೆ ಪುನಃ ಹೆಚ್ಚಿನ ನೀರಿನ ಬಿಲ್ ಬರುತ್ತಿದೆ ಅದನ್ನು ತಕ್ಷಣ ಸಂಬಂಧಪಟ್ಟ ಸಚಿವರಿಗೆ ತಿಳಿಸಿ ನಿಗದಿಯಾಗಿರುವ 125 ಗಳನ್ನು ಮಾತ್ರ ಪ್ರತಿ ಮನೆಯಲ್ಲೂ ಪಡೆಯುವಂತೆ ಅನುವು ಮಾಡಿಕೊಡಬೇಕೆಂದು ಶಾಸಕರಿಗೆ ಸಭೆಯಲ್ಲಿ ತಿಳಿಸಿದರು ರಸ್ತೆ
ಹುಲ್ಲಹಳ್ಳಿ ಹೋಗುವ ರಸ್ತೆ ಅಗೆದು ಕಾಮಗಾರಿ ನಡೆಯದೆ ಒಂದು ವಾರದಿಂದ ಹಾಗೆ ಬಿಟ್ಟಿರುವ ಬಗ್ಗೆ ಪ್ರಶ್ನೆ ಸಿದಾಗ ನನ್ನ ಗಮನಕ್ಕೆ ಬಾರದೆ ಕೆಲಸ ಮಾಡುತ್ತಿದ್ದರು ಮೊದಲ ಇರುತ್ತೆ ಚಿಕ್ಕದಾಗಿದ್ದು ಆದ್ದರಿಂದ ಮೊದಲು ರಸ್ತೆ ಅಗಲೀಕರಣ ಮಾಡಿ ನಂತರ ಮುಂದಿನ ಕೆಲಸ ಮಾಡಿ ಎಂದು ಸೂಚಿಸಿದ್ದೇನೆ ಇನ್ನು 15 ದಿನಗಳಲ್ಲಿ ಪೂರ್ಣ ಪ್ರಮಾಣದ ಕಾಮಗಾರಿಯಾಗಿ ಮುಗಿಸುವಂತೆ ಸೂಚಿಸಿದ್ದೇನೆ ಎಂದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ , ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್ ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠ ನಾಯಕ , ನಗರಸಭೆ ಸದಸ್ಯರಾದ ಪ್ರದೀಪ್ ಗಂಗಾಧರ ಸಿದ್ದಿಕ್ ಗಾಯತ್ರಿ ಮಹೇಶ್ ಮುಖಂಡರಾದ ಎನ್‍ಎಂ ಮಂಜುನಾಥ್ ಶಿವಪ್ಪ ದೇವರು ಶ್ರೀಧರ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.