ಉಪಕುಲಪತಿಗಳ ನೇಮಕ ಅರ್ಹತೆಗಿಂತ ಪಕ್ಷದ ಶಿಫಾರಸ್ಸಿನ ಮೇಲೆ ನೇಮಕ:ರಾಜ್ಯಪಾಲರ ಗರಂ

ತಿರುವನಂತಪುರಂ,ನ.9- ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳನ್ನು ಅರ್ಹತೆಯ ಆಧಾರದ ಮೇಲೆ ನೇಮಿಸುತ್ತಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ

ಉಪ ಕುಲಪತಿಗಳನ್ನು ಸಿಪಿಐಎ(ಎಂ) ಪಕ್ಷದ ಶಿಫಾರಸಿನ ಮೇರೆಗೆ ಅವರನ್ನು ಎಲ್ ಡಿಎಫ್ ಸರ್ಕಾರ ನಿಯಂತ್ರಿಸುತ್ತಿದೆ ಎಂದು ದೂರಿದ್ದಾರೆ.

ವಿಶ್ವವಿದ್ಯಾನಿಲಯಗಳ ವಿಷಯದಲ್ಲಿ ಅವರು ಎಲ್ಲಾ ಸಮಯದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದರು, ಅದರಿಂದ ಅಸಮಾಧಾನಗೊಂಡಿದ್ದೇನೆ ಹಸ್ತಕ್ಷೇಪ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಸಂಬಂಧಿಸಿಲ್ಲ ಎಂದಿದ್ದಾರೆ.

ಇದು ಹೆಚ್ಚಾಗಿ ಸಿಪಿಐಎಂ ನಾಯಕರ ಸಂಬಂಧಿಕರ ಬಗ್ಗೆ ವಿವಿಧ ಸ್ಥಾನಗಳಲ್ಲಿದೆ. ಅವರೆಲ್ಲರ ಆಸಕ್ತಿ ನೇಮಕಾತಿಯಲ್ಲಿ ಅಡಗಿದೆ ಎಂದು ದೂರಿದ್ದಾರೆ.

ಈ ಮೂಲಕ ಕೇರಳ ಸರ್ಕಾರ ಮತ್ತು ರಾಜ್ಯಪಾಲರ ಕಚೇರಿಯ ನಡುವಿನ ಮುಸುಕಿನ ಗುದ್ದಾಟ ಮತ್ತೊಂದು ರೂಪ ಪಡೆದುಕೊಂಡಿದೆ ಇದರಿಂದ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

9 ವಿಶ್ವವಿದ್ಯಾಲಯಗಳ ಕುಲಪತಿಗಳ ರಾಜೀನಾಮೆಗೆ ರಾಜ್ಯಪಾಲರು ಸೂಚಿಸಿದ್ದರು. ರಾಜ್ಯ ಸರ್ಕಾರ ಮಧ್ಯಪ್ರವೇಶಸಿದ್ದರಿಂದ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಸದ್ಯ ಎಲ್ಲಾ 9bಕುಲಪತಿಗಳು ಹೈಕೋರ್ಟ್ ನಿಂದ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇದು ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಗುದ್ದಾಟಕ್ಕೆ ಕಾರಣವಾಗಿದೆ