ಉನ್ನತ ಶಿಕ್ಷಣ ಸಚಿವರಿಗೆ ಮನವಿ

ಧಾರವಾಡ, ಎ.12-ರಾಜ್ಯದಲ್ಲಿ ಈಗಾಗಲೇ ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ 2015 ರ ಪೂರ್ವದಲ್ಲಿ ನಿವೃತ್ತಿ, ನಿಧನ, ರಾಜಿನಾಮೆಯಿಂದ ತೆರವಾದ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಿದಂತೆ ಅನುದಾನಿತ ಪಾಲಿಟೆಕ್ನಿಕ್ ಹಾಗೂ ಇಂಜನೀಯರಿಂಗ್ ಕಾಲೇಜುಗಳಲ್ಲಿ ನಿವೃತ್ತದಿಂದ ತೆರವಾದ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ಕೂಡ ನೀಡಲು ಒತ್ತಾಯಿಸಿ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಅಶ್ವತ್‍ನಾರಾಯಣರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು ಸುಮಾರು 41 ಅನುದಾನಿತ ಪಾಲಿಟೆಕ್ನಿಕ್ ಹಾಗೂ 6 ಇಂಜನೀಯರಿಂಗ್ ಕಾಲೇಜುಗಳು ಇರುವವು. ಇವುಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಹುದ್ದೆಗಳು ನಿವೃತ್ತಿಯಿಂದ ತೆರುವಾಗಿರುವವು. ಆದ್ದರಿಂದ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಹುದ್ದೆ ತುಂಬಿಕೊಳ್ಳಲು ಅನುಮತಿಸಬೇಕೆಂದು ಒತ್ತಾಯಿಸಲಾಯಿತು.
ಇದೇ ಸಂದರ್ಭದಲ್ಲಿ ಪಾಲಿಟೆಕ್ನಿಕ ಕಾಲೇಜುಗಳಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುವವರಿಗೆ ಂIಅಖಿ ವೇತನ ಶ್ರೇಣಿ ನೀಡದೇ ಅನ್ಯಾಯ ಆಗಿರುವುದನ್ನು ಕೂಡಲೇ ಸರಿಪಡಿಸಲು ಪ್ರತ್ಯೇಕ ಮನವಿಯನ್ನು ಕೂಡ ಸಲ್ಲಿಸಲಾಯಿತು ಎಂದು ವಿಧಾನ ಪರಿಷತ್ತ ಸದಸ್ಯ ಎಸ್.ವಿ.ಸಂಕನೂರ ಅವರು ತಿಳಿಸಿದ್ದಾರೆ.