ಉನ್ನತ ಶಿಕ್ಷಣ ಸಂಸ್ಥೆಗಳ ನೇಮಕಾತಿಯಲ್ಲಿ ಮೀಸಲಾತಿಗೆ ಕೊಕ್ಕೆ ಹಾಕುವ ಯುಜಿಸಿ ಸೂಚನೆಗೆ ಎಐಡಿಎಸ್‍ಓ ಆಕ್ರೋಶ

ಕಲಬುರಗಿ:ಜ.31:ಇನ್ನು ಮುಂದೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಡೆಯುವ ಶಿಕ್ಷಕರ ನೇಮಕಾತಿಗಳಲ್ಲಿ ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಮೀಸಲಾತಿಯನ್ನು ತೆಗೆದುಹಾಕಲು ಅವಕಾಶವಿರುವ ಮಾರ್ಗಸೂಚಿಯೊಂದನ್ನು ಯುಜಿಸಿಯು ಹೊರಡಿಸಿತ್ತು. ಈ ಮಾರ್ಗಸೂಚಿಗೆ ತೀವ್ರವಾದ ವಿರೋಧವು ವ್ಯಕ್ತವಾದ ಬೆನ್ನಲ್ಲೇ ಕೇಂದ್ರವು ಸಮಜಾಯಿಷಿ ನೀಡಿದೆ. ಮೀಸಲಾತಿಯನ್ನು ತೆಗೆದು ಹಾಕಲು ಅವಕಾಶವಿಲ್ಲ ಎಂದμÉ್ಟೀ ಹೇಳಿರುವ ಕೇಂದ್ರವು ಈ ಮಾರ್ಗಸೂಚಿಯನ್ನು ಹಿಂಪಡೆದಿಲ್ಲ .

ಮೀಸಲಾತಿಯನ್ನು ತೆಗೆದುಹಾಕುವುದರ ಮೇಲೆ ನಿμÉೀಧವನ್ನು ವಿಧಿಸಿದ್ದ ಹಿಂದಿನ ಮಾರ್ಗಸೂಚಿಯಲ್ಲಿನ ಹಲವು ಅಂಶಗಳಿಗೆ ತಿದ್ದುಪಡಿಯನ್ನು ತಂದಿರುವುದು ಈ ಆತಂಕವನ್ನು ಇನ್ನಷ್ಟು ತೀವ್ರವಾಗಿಸಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಜನಸಮುದಾಯಗಳಿಗೆ ಹೆಚ್ಚಿನ ಭರವಸೆಯನ್ನು ನೀಡುವ ಬದಲಿಗೆ ಆತಂಕಕ್ಕೆ ತಳ್ಳಿರುವ ಈ ಹೊಸ ಮಾರ್ಗಸೂಚಿಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಎಐಡಿಎಸ್‍ಓ ಆಗ್ರಹಪಡಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.